ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಭಿನಂದನಾ ಸಭೆ

0

ಉಜಿರೆ :ಉಜಿರೆಯಲ್ಲಿ ಫೆ. 3ರಿಂದ 5 ರ ತನಕ ಜರಗಿದ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗೆ ಅಭಿನಂದನಾ ಕಾರ್ಯಕ್ರಮ ಉಜಿರೆಯ ರಾಮಕೃಷ್ಣ ಸಭಾಭವನದಲ್ಲಿ ಮಾ.18 ರಂದು ಜರಗಿತು.


ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸಂಯೋಜನಾ ಸಮಿತಿ ಅಧ್ಯಕ್ಷ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, “ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ,ಡಾ.ಹೇಮಾವತಿ ವೀ.ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜರಗಿದ ರಜತ ವರ್ಷದ ಸಾಹಿತ್ಯ ಸಮ್ಮೇಳನ ಅಭೂತಪೂರ್ವವಾಗಿ ಮೂಡಿ ಬಂದಿದೆ.ಹಿರಿಯರ ಅನುಭವ,ಮಾರ್ಗದರ್ಶನ ಯಶಸ್ಸಿಗೆ ಕಾರಣ.ಸಮಯ ಪಾಲನೆ,ಸ್ವಚ್ಚತೆಗೆ ಮಹತ್ವ ನೀಡಿದ ವಿಶಿಷ್ಟ ಕಾರ್ಯಕ್ರಮವಾಗಿತ್ತು. ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
ತೆರೆಯಮರೆಯಲ್ಲಿ ಕೆಲಸ ಮಾಡುವ ಸ್ವಯಂ ಸೇವಕರು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗುತ್ತಾರೆ”. ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮಾತನಾಡಿ “ನಿರೀಕ್ಷೆಯಂತೆ ಎಲ್ಲರ ಸಹಕಾರದಲ್ಲಿ ಸಮ್ಮೇಳನ ಯಶಸ್ವಿಯಾಗಿ ಜರಗಿದೆ. ಉಜಿರೆ ಕೂಡ ಸಾಹಿತ್ಯ, ಸಾಂಸ್ಕೃತಿಕ ನಗರಿ ಎಂಬುದು ಸಮ್ಮೇಳನದಿಂದ ಸಾಬೀತಾಗಿದೆ. ಗುಣಾತ್ಮಕ ಅಂಶಗಳೊಂದಿಗೆ ಸದಾ ಟೀಕೆ ಮಾಡುವವರಿಂದಲೂ ಈ ಬಾರಿಯ ಸಮ್ಮೇಳನ ಹೊಗಳಿಕೆಗೆ ಪಾತ್ರವಾಗಿದೆ.ನಾನಾ ಸಮಿತಿ ಸದಸ್ಯರು ವಿಶೇಷ ಮುತುವರ್ಜಿವಹಿಸಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ.ಮುಂದಿನ ದಿನಗಳಲ್ಲಿ ಕ.ಸಾ.ಪ.ವತಿಯಿಂದ ಹೆಚ್ಚಿನ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ.ಹೋಬಳಿ, ಗ್ರಾಮ ಘಟಕ ರಚನೆಯ ಕುರಿತು ಯೋಜನೆ ರೂಪಿಸಲಾಗಿದೆ” ಎಂದರು.
ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ ಉಪಸ್ಥಿತರಿದ್ದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಸ್ವಾಗತಿಸಿದರು.
ಸಮ್ಮೇಳನದ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಾಲಯ ಮುಖ್ಯಸ್ಥ ಹರ್ಷ ಕುಮಾರ್ ಲೆಕ್ಕ ಪತ್ರ ಮಂಡಿಸಿದರು.ರಮೇಶ್ ಮಯ್ಯ ವಂದಿಸಿದರು.
ಸಾಂಸ್ಕೃತಿಕ ಸಮಿತಿ ಪರವಾಗಿ ವಿದ್ಯಾಶ್ರೀ ಅಡೂರು,ಕಾರ್ಯಕ್ರಮ ಸಂಯೋಜನೆ ಸಮಿತಿಯ ಸಂಚಾಲಕ ಡಾ.ಬಿ.ಎ. ಕುಮಾರ್ ಹೆಗ್ಡೆ, ಪುಸ್ತಕ ಬಿಡುಗಡೆ ಸಮಿತಿಯ ಗಂಗಾರಾಣಿ ಜೋಶಿ,ಸ್ವಯಂ ಸೇವಕ ಸಮಿತಿಯ ಡಾ.ಪ್ರಸನ್ನ ಕುಮಾರ್ ಐತಾಳ್,ವಸ್ತು ಪ್ರದರ್ಶನ ಸಮಿತಿಯ ಯತೀಶ್,ಮಾಧ್ಯಮ ಸಮಿತಿಯ ಡಾ.ಭಾಸ್ಕರ ಹೆಗಡೆ,ಸ್ಮರಣ ಸಂಚಿಕೆ ಸಮಿತಿಯ ದಿವಾ ಕೊಕ್ಕಡ ಮಾತನಾಡಿ ಸಮ್ಮೇಳನದ ಅನಿಸಿಕೆ ವ್ಯಕ್ತ ಪಡಿಸಿದರು.
ಇತ್ತೀಚೆಗೆ ಅಗಲಿದ ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

p>

LEAVE A REPLY

Please enter your comment!
Please enter your name here