ಬೆಳ್ತಂಗಡಿ: ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು ಮತ್ತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಳ್ತಂಗಡಿಯ ಲಾಯಿಲದಲ್ಲಿ ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ ಮಾ.4, 5 ರಂದು ನಡೆಯಲಿದ್ದು ಮಾ. 4 ರಂದು ನಡೆದ ಉದ್ಘಾಟನಾ ಸಮಾರಂಭವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಹೊರನಾಡು ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಶುಭಾ ಶಂಸನೆ ಗೈದರು, ಸಭಾಧ್ಯಕ್ಷತೆಯನ್ನು ಸ್ಥಾನಿಕ ಬ್ರಾಹ್ಮಣ ಮಹಾಂಡಲ ಅಧ್ಯಕ್ಷ ಎಂ. ದೇವಾನಂದ ಭಟ್ ವಹಿಸಿದ್ದರು. ಸಮ್ಮೇಳನ ಅಧ್ಯಕ್ಷತೆ ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಅಧ್ಯಕ್ಷ ಪಿ ರಾಧಾಕೃಷ್ಣ ರಾವ್ ಧರ್ಮಸ್ಥಳ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ , ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ ಭಾಗವಹಿಸಿದ್ದರು.
ಸಮಾವೇಶದ ಗೌರವ ಅಧ್ಯಕ್ಷ ಎಸ್. ಕೆ. ಜಗನ್ನಿವಾಸ ರಾವ್, ಸಂಚಾಲಕ ಪಿ. ಲಕ್ಷ್ಮೀನಾರಾಯಣ ರಾವ್, ಕಾರ್ಯದರ್ಶಿ ಬಿ. ಕೆ. ಧನಂಜಯ ರಾವ್, ಗೌರವ ಸಲಹೆಗಾರ ಅರುಣ್ ಕುಮಾರ್ ಎಂ. ಎಸ್, ದಿನೇಶ್ ಕುಮಾರ್ ಎಂ. ಎಸ್., ರೇಖಾ ಸುಧೀರ್ ರಾವ್, ಕೋಶಾಧಿಕಾರಿ ಮಿಥುನ್ ರಾವ್, ಉಪಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ರಾವ್, ಪ್ರಶಾಂತ್, ಶಿವಾನಂದ ರಾವ್, ಮಹಿಳಾ ವೇದಿಕೆ ಅಧ್ಯಕ್ಷೆ ಮಮತ ರಾವ್, ಕಾರ್ಯದರ್ಶಿ ನಿಶಾ ವಿಶ್ವನಾಥ್, ಯುವ ವೇದಿಕೆ ಅಧ್ಯಕ್ಷ ಪವನ್ ರಾವ್, ಕಾರ್ಯದರ್ಶಿ ನಿತಿನ್ ರಾವ್, 18 ಮಹಾ ಮಂಡಲದ ಪದಾಧಿಕಾರಿಗಳು ಸದಸ್ಯರು, ವಲಯಗಳ ಪದಾಧಿಕಾರಿಗಳು, ಸದಸ್ಯರು, ಸ್ಥಾನಿಕ ಬಂಧುಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಕರ್ತರಾದ ಭೀಮೇಶ್ವರ ಜೋಷಿ ಯವರನ್ನು ಭವ್ಯ ಮೆರವಣೆಗೆಯಲ್ಲಿ ಕರೆತಲಾಯಿತು.
ಕಾರ್ಯಕ್ರಮದಲ್ಲಿ 18 ಸಭಾ ಸಾಧಕರನ್ನು ಸನ್ಮಾನಿಸಲಾಯಿತು.