ಕೊಲ್ಲಿಯಲ್ಲಿ ಯುವವಾಹಿನಿ ಆಶ್ರಯದಲ್ಲಿ ಬೃಹತ್ ಆರೋಗ್ಯ ಶಿಬಿರ

0

ಮಿತ್ತಬಾಗಿಲು : ಯುವವಾಹಿನಿ ಬೆಳ್ತಂಗಡಿ ಘಟಕ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ (ರಿ) ಯುವವಾಹಿನಿ ಸಂಚಲನ ಸಮಿತಿ ಮಿತ್ತಬಾಗಿಲು-ಮಲವಂತಿಗೆ ಮತ್ತು ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಆಶ್ರಯದಲ್ಲಿ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಬೃಹತ್ ಆರೋಗ್ಯ ಶಿಬಿರ ನಡೆಯಿತು..

ಕಾರ್ಯಕ್ರಮವನ್ನು ಕೊಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ರಾವ್ ಕಕ್ಕೆನೇಜಿ ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ , ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್ ಬೆಳ್ತಂಗಡಿ, ಘಟಕದ ಆರೋಗ್ಯ ನಿರ್ದೇಶಕ ಯಶೋಧರ ಮುಂಡಾಜೆ, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲತಾ ಹರೀಶ್ , ಕೆ.ಎಂ.ಸಿ ಸಿಬಂದಿ ಉದಯ್.ಜೆ, ಯುವವಾಹಿನಿ ಸಂಚಲನ ಸಮಿತಿ ಮಿತ್ತಬಾಗಿಲು-ಮಲವಂತಿಗೆ ಇದರ ಅಧ್ಯಕ್ಷ ಸುಧಾಕರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು. ಶ್ರೀಶ ಬಳಗದ ಪ್ರಾರ್ಥನೆ ಯೊಂದಿಗೆ ಸುರೇಂದ್ರ ಬಂಗಾಡಿ ಸ್ವಾಗತಿಸಿ ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಮಾಲೂರು ವಂದಿಸಿದರು. ಶ್ರೀಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಸಿಬಂದ್ದಿಗಳು, ಯುವವಾಹಿನಿ ಘಟಕದ ಪದಾದಿಕಾರಿಗಳು, ಮಾಜಿ ಅಧ್ಯಕ್ಷರು, ಸಂಚಲನಾ ಸಮಿತಿ ಸದಸ್ಯರು ಭಾಗವಹಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here