ಫೆ.25-26: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ರಜತ ಸಂಭ್ರಮ

0

ಬೆಳ್ತಂಗಡಿ : ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಸುಬ್ರಹ್ಮಣ್ಯ ನಗರ ಲಾಲ ಬೆಳ್ತಂಗಡಿ ಸಾರ್ಥಕ 25 ವರ್ಷಗಳ ಸೇವೆ ನೀಡಿದ್ದು ಸಭಾದ ಬೆಳ್ಳಿ ಹಬ್ಬದ ಅಂಗವಾಗಿ ದಕ್ಷಿಣಾಮ್ನಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ಮಜ್ಜಗದ್ಗುರು ಭಾರತಿ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕಕಮಲ ಸಂಜಾತರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಫೆ.25 ಮತ್ತು 26 ರಂದು ರಜತ ಸಂಭ್ರಮ ನಡೆಯಲಿದೆ.
ಫೆ.25 ರಂದು ಅಪರಾಹ್ನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಸಭಾದ ಅಧ್ಯಕ್ಷ ಪಿ. ರಾಧಾಕೃಷ್ಣ ರಾವ್ ಧರ್ಮಸ್ಥಳ ಅಧ್ಯಕ್ಷತೆ ವಹಿಸಲಿದ್ದಾರೆ. ಶೃಂಗೇರಿ ಶಾಖಾ ಮಠ ಕೋಟೆಕಾರ್ ನ ಧರ್ಮಾಧಿಕಾರಿ ಬಿ. ಸತ್ಯಶಂಕರ ಬೊಳ್ಳಾವ, ನಿವೃತ್ತ ಡಿ ವೈ ಎಸ್ ಪಿ ಕೆ. ಎಲ್. ರಾವ್, ಬೆಂಗಳೂರು ಅಖಿಲ ಭಾರತ ಶಿವ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ಅಜ್ಜಾವರ ಶಿವರಾವ್, ಮಂಗಳೂರು ಸ್ಥಾನಿಕ ಬ್ರಾಹ್ಮಣ ಮಹಾ ಮಂಡಲದ ಅಧ್ಯಕ್ಷ ದೇವಾನಂದ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರಜತ ಸಂಚಿಕೆ ಬಿಡುಗಡೆ, ಸಭಾದ ಸ್ಥಾಪಕ ಪದಾಧಿಕಾರಿಗಳಿಗೆ ಸನ್ಮಾನ, ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ.26 ರಂದು ಬೆಳಿಗ್ಗೆ ಗಣಹೋಮ, ನಂತರ ಸಭಾದ ವಿವಿಧ ವಲಯದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಮಧ್ಯಾಹ್ನ ರಜತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪಿ. ಲಕ್ಷ್ಮೀ ನಾರಾಯಣ ರಾವ್ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದೆ. ಅತಿಥಿಗಳಾಗಿ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿ ಬ್ರಹ್ಮಶ್ರೀ ವಾಗೇಶ್ ಶಾಸ್ತ್ರಿ, ಮಂಗಳೂರು ಸಭಾದ ಅಧ್ಯಕ್ಷ ಕ್ಯಾದಿಗೆ ಹರ್ಷ ಕುಮಾರ್, ಬ್ರಹ್ಮಾವರ ಬಾರ್ಕೂರು ಶ್ರೀ ಜ್ಞಾನ ಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಸವಿತಾ ಎರ್ಮಳ್, ನವೀನ್ ಚಂದ್ರ ರಾವ್ ಬೆಂಗಳೂರು ಭಾಗವಹಿಸಲಿದ್ದಾರೆ ಈ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಲಿದೆ ಎಂದು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಪಿ. ರಾಧಾಕೃಷ್ಣ ರಾವ್, ರಜತ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಪಿ. ಲಕ್ಷ್ಮೀ ನಾರಾಯಣ ರಾವ್, ಕಾರ್ಯದರ್ಶಿ ಬಿ. ಕೆ. ಧನಂಜಯ ರಾವ್ ತಿಳಿಸಿದ್ದಾರೆ

p>

LEAVE A REPLY

Please enter your comment!
Please enter your name here