ವೇಣೂರು: ಅಜಿಲ ಸೀಮೆಯ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನಡೆಯುತ್ತಿದ್ದು ಹಸಿರುವಾಣಿ ಹೊರೆಕಾಣಿಕೆ ಜಿಲ್ಲೆಯಾದ್ಯಂತ ಹರಿದು ಬಂದಿದೆ.
ಹಸಿರುವಾಣಿ ಹೊರೆ ಕಾಣಿಕೆಯನ್ನು ಸುಂದರವಾದ ಉಗ್ರಾಣ ನಿರ್ಮಿಸಿ ಭಕ್ತರಿಗೆ ವೀಕ್ಷಿಸಲು ಅವಕಾಶ ನೀಡಲಾಗಿದೆ.
ದೇಗುಲದ ಜೀರ್ಣೋದ್ಧಾರಕ್ಕೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ ವೇಣೂರು ಗೋಪಿಕಾ ನಿವಾಸದ ಕಮಲ ಬಂಗೇರರವರು ಉಗ್ರಾಣದ ಉದ್ಘಾಟನೆಯನ್ನು ನೆರವೇರಿಸಿ ಶುಭಕೋರಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ,ಧಾರ್ಮಿಕ ಪರಿಷತ್ತು ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾದ ಸುಂದರ ಹೆಗ್ಡೆ, ಎಚ್.ಸೋಮಯ್ಯ ಹನೈನಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಜ್ಞ ನಾರಾಯಣ ಭಟ್, ಸತೀಶ್ ಗೋಪಿಕಾ ನಿವಾಸ ವೇಣೂರು, ರಾಧಾಕೃಷ್ಣ ಹೊಳ್ಳ, ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.