ಉಜಿರೆ:ಸಮೂಹ ಉಜಿರೆ ಆಶ್ರಯದಲ್ಲಿ ಯಕ್ಷ ರಂಗಾಯಣ ತಂಡದಿಂದ ಪ್ರಸ್ತುತಗೊಂಡ ಪರಶುರಾಮ ನಾಟಕ ಉಜಿರೆಯ ವನರಂಗ ಬಯಲು ರಂಗ ಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ನಡುವೆ ಪ್ರದರ್ಶನಗೊಂಡು ನಾಟಕ ರಂಗಾಸಕ್ತರ ಮನಸೂರೆಗೊಂಡಿತು.
ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ಪುರಾಣ, ಜಾನಪದ, ಕಾವ್ಯ ಹಾಗೂ ಸಮಕಾಲೀನ ಆಗುಹೋಗುಗಳ ಹದವಾದ ಮಿಶ್ರಣದ ಅಭಿವ್ಯಕ್ತಿಯಾಗಿದೆ. ಸಮರ್ಥ ನಿರ್ದೇಶನ, ಪಕ್ವ ಅಭಿನಯ, ಇಂಪಾದ ಸಂಗೀತ ಹಾಗೂ ಮನಮೋಹಕ ರಂಗ ಸಜ್ಜಿಕೆಯಿಂದ ನಾಟಕ ಆರಂಭದಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ರಂಜಿ ಸುವಲ್ಲಿ ಯಶಸ್ವಿಯಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ .ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ಕೆ.ಚಿನ್ನಪ್ಪಗೌಡ, ಶಶಿರಾಜ್ ರಾವ್ ಕಾವೂರು ಹಾಗೂ ಅನೇಕ ಗಣ್ಯರು ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮೂಹ ಉಜಿರೆ ಸಂಘಟನೆಯ ಅಧ್ಯಕ್ಷ ಡಾ. ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಟಕದ ನಿರ್ದೇಶಕ ಜೀವನ ರಾಮ್ ಸುಳ್ಯ ಕಲಾವಿದರನ್ನು ಪರಿಚಯಿಸಿದರು.