ಕುವೆಟ್ಟು: ಓಡೀಲು ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಣ್ಣಾಯರ ನೇತ್ರತ್ವದಲ್ಲಿ ಫೆ.2ರಿಂದ ಪ್ರಾರಂಭಗೊಂಡು ಫೆ.4 ರವರೆಗೆ ನಡೆಯಲಿದೆ.
ಫೆ.2 ರಂದು ಬೆಳಿಗ್ಗೆ ಶತರುದ್ರಾಭಿಷೇಕ , ಮಧ್ಯಾಹ್ನ ಮಹಾಪೂಜೆ, ಸಂಜೆ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಶ್ರೀ ದುರ್ಗಾ ಪೂಜೆ ನಡೆಯಿತು. ಸಂಜೆ ಪಡಂಗಡಿ, ಗುರುವಾಯನಕೆರೆ, ಪಣಕಜೆ, ಮದ್ದಡ್ಕ ಸೋಣಂದೂರು ಕಡೆಯಿಂದ ವಿಜೃಂಭಣೆಯ ಹೊರಕಾಣಿಕೆ ಮೆರವಣಿಗೆ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಓಡೀಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಹಿಸಿದ್ದರು. ಬೆಂಗಳೂರು ಹೈಕೋರ್ಟು ವಕೀಲ ಪ್ರಜ್ವಲ್ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದ್ದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿದ್ಯಾನಂದ ಇಡ್ಯ, ವ್ಯವಸ್ಥಾಪಕ ಸಮಿತಿ ಸದಸ್ಯರಾದ ಶಾಂತ ಜೆ ಬಂಗೇರ, ಕೆ. ವಿಜಯ ಸಾಲ್ಯಾನ್ ಪಣಕಜೆ, ಎಸ್ ಗಂಗಾಧರ ರಾವ್ ಕೆವುಡೇಲು, ರಾಮು ಬಸ್ತಿ ಪಲ್ಕೆ ಪಡಂಗಡಿ, ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಸುಕೇಶ್ ಪೂಜಾರಿ ಓಡೀಲು, ನೇಹಾ ನಾಯಕ್, ಭಜನಾ ಸಮಿತಿಯ ಅಧ್ಯಕ್ಷ ಸಂದೇಶ್ ಅನಿಲ, ಕಾರ್ಯದರ್ಶಿ ಕುಶಾಲಪ್ಪ ಕಿನ್ನಿಗೋಳಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುರಿಪಟ್ಟ, ಕೋಶಾಧಿಕಾರಿ ವಸಂತ ಗೌಡ ವರಕಬೆ, ಪ್ರಧಾನ ಅರ್ಚಕ ಎಮ್. ರಘರಾಮ್ ಭಟ್ ಮಠ, ಯುವ ಸಮಿತಿ ಅಶ್ವಿತ್ ಎಮ್.ಓಡೀಲು, ಶ್ರೀಮತಿ ಧನಲಕ್ಷ್ಮೀ ಚಂದ್ರಶೇಖರ ಸಬರಬೈಲು, ವಿಕಾಸ್ ಎಂ.ಶೆಟ್ಟಿ, ಶ್ರೀಮತಿ ದೀಕ್ಷಾ ಸದಾನಂದ ಗೇರುಕಟ್ಟೆ, ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ ಸ್ವಾಗತಿಸಿ, ಭಜನಾ ಸಮಿತಿಯ ಅಧ್ಯಕ್ಷ ಸಂದೇಶ್ ಅನಿಲ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ದೇವರ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು. ವಿವಿಧ ಭಜನಾ ಸಮಿತಿಯನ್ನು ಗೌರವಿಸಲಾಯಿತು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಹಾಗೂ ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು.