ಕರಿಮಣೇಲು: ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ದೇಲಂಪುರಿಯಲ್ಲಿ ಜ.21 ರಿಂದ ಜ.25 ರವರೆಗೆ ದೃಢಕಲಶಾಭಿಷೇಕ ಹಾಗೂ ಜಾತ್ರಾ ಮಹೋತ್ಸವ, ಶ್ರೀ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವವು ಜರುಗಿತು.
ಜ.21 ರಂದು ರಾಕ್ಷೋಘ್ನ ಹೋಮ, ವಾಸ್ತು ಹೋಮ, ಬ್ರಹ್ಮರ ಸ್ಥಾನದಲ್ಲಿ ರಾಕ್ಷೋಘ್ನ ಹೋಮ, ವಾಸ್ತುಹೋಮ, ಜ.೨೨ ರಂದು ನವಕ ಕಲಶಾಭಿಷೇಕ, ಗಣಹೋಮ, ಕಲಶಾಧಿವಾಸ, ಅಧಿವಾಸ ಹೋಮ, ದಢಕಲಶಾಭಿಷೇಕ, ಬ್ರಹ್ಮರ ಪ್ರತಿಷ್ಠೆ, ಕಲಶಾಭಿಷೇಕ,ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ,ಭಜನೆ, ರಂಗಪೂಜೆ,ನಿತ್ಯಬಲಿ ಉತ್ಸವ. ಜ.23 ಶ್ರೀ ದೇವರಿಗೆ ಏಕದಶ ರುದ್ರಾಭಿಷೇಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದೈವ ಶ್ರೀ ಕೊಡಮಣಿತ್ತಾಯ ಮುಹೂರ್ತ ಕಂಬ, ಗುರ್ಜಿ ಹಾಕುವುದು, ಗುತ್ತುಗಳಿಂದ ದೈವಗಳ ಭಂಡಾರ ಆಗಮನ, ಸಂಜೆ ಭಜನೆ, ರಾತ್ರಿ ರಂಗಪೂಜೆ, ನಿತ್ಯಬಲಿ ಉತ್ಸವ, ಶ್ರೀ ದೈವ, ಶ್ರೀ ಕೊಡಮಣಿತ್ತಾಯ ನೇಮೋತ್ಸವ. ಜ.24 ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಭಜನೆ, ಶ್ರೀ ದೇವರುಗಳಿಗೆ ವಿಶೇಷ ಪೂಜೆ, ಉತ್ಸವ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಜ..25 ರಂದು ರಂಗಪೂಜೆ ನಡೆಯಿತು.