ಬಂಗಾಡಿ: ಅಷ್ಟ ಪವಿತ್ರ ನಾಗ ಬ್ರಹ್ಮಲಿಂಗೇಶ್ವರ ದೇವಾಲಯ ಹಾಗೂ ಮಹಾಗಣಪತಿ ದೇವರ ಪ್ರತಿಷ್ಠ ಬ್ರಹ್ಮಕಲಶದ 3 ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಮಹಾಗಣಪತಿ ದೇವಾಲಯದ ಆಡಳಿತ ಮುಕ್ತೇಸರ ಧನಂಜಯ ಅಜ್ರಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಧನಂಜಯರಾವ್ ಕೊಲ್ಲಿ ಧರ್ಮಕ್ಕೆ ಹಲವಾರು ಬಣ್ಣಗಳಿದ್ದು ಅದನ್ನು ವರ್ಣಿಸಲು ಅಸಾಧ್ಯ ಪ್ರಕೃತಿಯ ರಕ್ಷಣೆಗೆ ಹಿಂದಿನವರು ಕಂಡುಕೊಂಡ ದಾರಿಯೇ ನಾಗಬನ ಒಂದು ಮರದ ಬುಡದಲ್ಲಿರುವ ನಾಗನ ಕಲ್ಲು ಆ ಪ್ರಕೃತಿಯನ್ನೇ ರಕ್ಷಿಸುತ್ತದೆ ಎಂದು ನುಡಿದರು.
ಇದೇ ಸಮಯ ಲಕ್ಷ್ಮೀನಾರಾಯಣ ಅಸ್ರಣ್ಣರು ಕಟೀಲು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಎಲ್ಲ ಧರ್ಮಕ್ಕಿಂತ ನಮ್ಮ ಧರ್ಮವೇ ಶ್ರೇಷ್ಠ ಎನ್ನುವುದನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತ ವಿಶ್ವಕ್ಕೆ ಯೋಗದ ಮಹತ್ವವನ್ನು ಪರಿಚಯಿಸಿ ಹಿಂದೂ ಧರ್ಮದಲ್ಲಿ ಹೆಣ್ಣನ್ನು ಮಾತೆಯ ರೀತಿ ಪೂಜಿಸಿ ಧಾರ್ಮಿಕ ಚಿಂತನೆಯಲ್ಲಿ ನಾರಿಗೆ ಮಂತ್ರಿಯ ಸ್ಥಾನ ನೀಡಿದ್ದು, ಭಾರತೀಯ ಸಂಸ್ಕೃತಿ ಯಾವುದೇ ಕಾರಣಕ್ಕೂ ಹಿಂದೂ ಧರ್ಮ ಧಾರ್ಮಿಕ ಚಿಂತನೆ ನಶಿಸಬಾರದು ಎಂಬ ಉದ್ದೇಶದಿಂದಲೇ ದೇವಸ್ಥಾನವನ್ನ ಸೃಷ್ಟಿಸಿ ದೇವರಲ್ಲಿ ಭಯ ಹಾಗೂ ಭಕ್ತಿಗೆ ದೇವರ ಸನ್ನಿಧಿ ಶ್ರೇಷ್ಠ ಜಾಗವೆಂದು ನಿರ್ಧರಿಸಿದ್ದೆ ನಮ್ಮ ಹಿರಿಯರು ಧರ್ಮ ಎಂದು ನಶಿಸಲು ಅಸಾಧ್ಯ ಎಂದು ಅಸ್ತ್ರನ್ನರು ನುಡಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಪ್ರಮುಖರಲ್ಲಿ ಡಾ. ಪ್ರದೀಪ್, ಭಾಸ್ಕರ್ ಧರ್ಮಸ್ಥಳ, ತಿಮ್ಮಪ್ಪ ಗೌಡ ಬೆಲಾ ಳು, ಡಾ. ಕೃಷ್ಣ ಪ್ರಸನ್ನ, ಅಶೋಕ್ ಭಟ್ ಕೊಯ್ಯುರು, ಜಯಂತಗೌಡ ಗುರಿಪಲ್ಲ, ಚಂದ್ರಶೇಖರ, ವೆಂಕಪ್ಪ ಮೂಲ್ಯ ನಿರ್ಮಾಳ, ಶ್ರೀಧರ ಗುಡಿಗಾರ, ಜೀವ0ದರ್ ಜೈನ್ ನಾಗೇಶ್, ಚಂದ್ರಶೇಖರ್ ಹೊಳೆಕೆರೆ, ಉಪಸ್ಥಿತರಿದ್ದರು.
ಈ ಧಾರ್ಮಿಕ ಸಭೆಯನ್ನು ಡಾ. ಪ್ರದೀಪ್ ಸ್ವಾಗತಿಸಿ, ಚಂದ್ರಶೇಖರ್ ಕಾಂಜಾನು ವಂದಿಸಿದರು. ರಮೇಶ್ ಫೈಲಾರ್ ನಿರೂಪಿಸಿದರು.