ಕೊಕ್ಕಡ: ಜೇಸಿ ಸಾಮಾನ್ಯ ಸಭೆ: ಕ್ರಿಯಾ ಯೋಜನೆಗೆ ಮಂಜೂರಾತಿ

0

ಕೊಕ್ಕಡ : ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ 2023 ನೇ ಸಾಲಿನ ಪ್ರಥಮ ಸಾಮಾನ್ಯ ಸಭೆಯು ಕೊಕ್ಕಡ ಮರಿಯಾ ಕೃಪಾ ಸಂಕೀರ್ಣದ ಕಚೇರಿಯಲ್ಲಿ ಜ.15 ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿತೇಶ್ ಎಲ್ ಪಿರೇರಾ ವಹಿಸಿದ್ದರು. 2023 ನೇ ವರ್ಷದಲ್ಲಿ ಯುವ ಜೇಸಿಗಳಿಗೆ ತರಬೇತಿ, ವ್ಯಕ್ತಿತ್ವ ವಿಕಸನ ಮಾಲಿಕೆ, ಜೇಸಿ ಅಧ್ಯಯನ ಪ್ರವಾಸ, ನೇಜಿ ನಾಟಿ ಉತ್ಸವ, ಯುವಜನರಿಗೆ ವ್ರತ್ತಿ ಮಾರ್ಗದರ್ಶನ, ಜೇಸಿ ಫೌಂಡೇಶನಿಗೆ ಹೆಚ್. ಜಿ.ಎಫ್. ಕೊಡುಗೆ, ಆಯ್ದ ಶಾಲೆಗಳಲ್ಲಿ ಅಕ್ಷರ ದೀವಿಗೆ ಅನ್ವಯ ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿಗಳಿಗೆ ಸ್ವಚ್ಛತಾ ಆಂದೋಲನ, ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ , ಮುಂತಾದ ನೂರಾರು ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು.

ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರು ಬದಲಾದ ಜೇಸಿ ಸದಸ್ಯತ್ವ ಶುಲ್ಕದ ಮಾಹಿತಿ ನೀಡಿದರು. ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ ರಾವ್ ಶುಭ ಹಾರೈಸಿದರು. ಹಿರಿಯ ಜೇಸಿಗಳಾದ ಜೋಸೆಫ್ ಪಿರೇರಾ, ಜೆಸಿಂತಾ ಡಿ ಸೋಜ ಮಾರ್ಗದರ್ಶನ ನೀಡಿದರು. ಉಪಾಧ್ಯಕ್ಷ ಯು.ನರಸಿಂಹ ನಾಯಕ್ ಜೇಸಿ ವಾಣಿ ವಾಚಿಸಿದರು.
ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here