ಪಟ್ರಮೆ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನಾರು ಇಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.14ರಂದು ಪ್ರಾರಂಭಗೊಂಡು ಜ.18ರ ವರೆಗೆ ಜರುಗಲಿದೆ.
ಜ.14ರಂದು ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ನಿತೇಶ್ ಬಲ್ಲಾಳ್ ಉಳಿಯಬೀಡು ವಹಿಸಿದ್ದರು. ಮೂಡಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಗಣೇಶ್ ಗೌಡ ಕಳಾಯಿ ಆಗಮಿಸಿದ್ದರು. ವೇದಿಕೆಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಹರೀಶ್ ಗೌಡ ಅಪ್ರೋಡಿ, ಕಾರ್ಯದರ್ಶಿ ಶರತ್ಚಂದ್ರ ಹಿರ್ತಡ್ಕ ಉಪಸ್ಥಿತರಿದ್ದರು.
ಈ ಸಂಧರ್ಭ ಯುವರಾಜ್ ಜೈನ್ ಮೂಡಬಿದಿರೆ, ದೇವಸ್ಥಾನದ ಮುಂಭಾಗಕ್ಕೆ ಇಂಟರ್ ಲಾಕ್ ಒದಗಿಸಿದ ಗಣೇಶ್ ಗೌಡ ಕಳಾಯಿ, ಜಾತ್ರೋತ್ಸವದ ವ್ಯವಸ್ಥೆಗೆ ಸಹಕರಿಸಿದ ಸೇವಾ ಸಮಿತಿಯ ಸರ್ವಸದಸ್ಯರ ಪರವಾಗಿ ಅಧ್ಯಕ್ಷ ಹರೀಶ್ ಗೌಡ ಅಪ್ರೋಡಿ ಹಾಗೂ ಕಾರ್ಯದರ್ಶಿ ಶರತ್ಚಂದ್ರ ಹಿರ್ತಡ್ಕ ರವರನ್ನು, ಜಾತ್ರೋತ್ಸವಕ್ಕೆ ಹೂ ಒದಗಿಸಿದ ಹಾಗೂ ಅನ್ನ ಸಂತರ್ಪಣೆ ಸೇವಾಕರ್ತರನ್ನು ಸನ್ಮಾನಿಸಲಾಯಿತು.
ಸ. ಉ. ಹಿ. ಪ್ರಾ. ಶಾಲೆಯಲ್ಲಿ 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ರೇಷ್ಮಾಳನ್ನು ಗೌರವಿಸ ಲಾಯಿತು.
ಭವ್ಯಾ ಕಾಯಿಲ ಪ್ರಾರ್ಥಿಸಿದರು. ವರ್ಣಶ್ರೀ ಸ್ವಾಗತಿಸಿದರು. ಅಕ್ಷಯ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿ, ದಿವ್ಯಾ ಹೊಸಮನೆ ಧನ್ಯವಾದವಿತ್ತರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ ಸ. ಉ. ಹಿ. ಪ್ರಾ. ಶಾಲೆ ಅನಾರು ಮತ್ತು ಸ. ಕಿ. ಪ್ರಾ. ಶಾಲೆ ಸುರ್ಯತ್ತಾವು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಊರ ಕಲಾವಿದರಿಂದ ನಾಟಕ ಪ್ರದರ್ಶನ ‘ ‘ ಭಾಗ್ಯಲಕ್ಷ್ಮಿ’ ನಡೆಯಿತು.