ರೆಖ್ಯಾ: ಗುಡ್ರಾದಿ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.13 ರಂದು ಪ್ರಾರಂಭಗೊಂಡಿತು.
ಸಂಜೆ ನೂತನವಾಗಿ ನಿರ್ಮಾಣಗೊಂಡ ಅನ್ನಛತ್ರದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ ವಹಿಸಿದ್ದರು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಟಿ.ಕೆ ಸದಾಶಿವ, ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷ ನವೀನ್ ರೆಖ್ಯಾ, ಕುಶಾಲಪ್ಪ ಗೌಡ ಪಾಪಿನಮಂಡೆ, ಶೀನಪ್ಪ ರೈ ಏಂತಿಮಾರು ಬೀಡು, ದಾಮೋದರ ಗೌಡ ಉಪಸ್ಥಿತರಿದ್ದರು. ಜ.21 ರಂದು ಜರಗಲಿರುವ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅನ್ನದಾನದ ಸೇವಾ ಕರ್ತರಾದ ರವಿ ಎನ್ ಹೆಬ್ಬಾಳ, 15 ದಿನಗಳಲ್ಲಿ ಅನ್ನಛತ್ರ ನಿರ್ಮಿಸಿಕೊಟ್ಟ ಪೂವಪ್ಪ ಗೌಡ ಕೀಜನ, ಸೀತಾರಾಮ ಗೌಡ ಗೊಬ್ಬರತಂಡ , ಮನೋಹರ ಎಡ್ಮಡ್ಕ, ಸತೀಶ್ ಬೂಡುದಮಕ್ಕಿ. ಜರ್ನಾದನ ಕೆರೆಜಾಲು, ಹರೀಶ್ ಹಾರ್ಜಾಳ ರವರನ್ನು ಸನ್ಮಾನಿಸಲಾಯಿತು.
ನಾರಾಯಣ ಊರ್ನಡ್ಕ ಸ್ವಾಗತಿಸಿ, ಕೊನೆಗೆ ಧನ್ಯವಾದವಿತ್ತರು, ಚೇತನ್ ಪಿ.ಕೆ , ಯೋಗೀಶ್ ಪಿ, ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಸ್ಕಿರಿ ಕುಡ್ಲ ಇವರಿಂದ ತೆಲಿಕೆ ಬಂಜಿ ನಿಲಿಕೆ ನಾಟಕ ಜರುಗಿತು.
ಬೆಳಿಗ್ಗೆ ಉಗ್ರಾಣ ಮೂಹೂರ್ತ, ರಾತ್ರಿ ಮಹಾಪೂಜೆ, ದೇವರ ಬಲಿ ಹೊರಟು ಭೂತಬಲಿ ಮಹೋತ್ಸವ, ಕಟ್ಟೆಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಜ.14 ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ತುಲಾಭಾರ ಸೇವೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.