ಉಜಿರೆ: ಯಕ್ಷಗಾನ ಭಕ್ತಿ- ಭಾವಗಳ ಸಮ್ಮಿಲನ. ಮಕ್ಕಳು ಶಿಕ್ಷಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ಕಲಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕು. ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಯಕ್ಷಗಾನ ರಂಗದಲ್ಲಿ ವಿದ್ಯಾರ್ಥಿಗಳೂ ಕೂಡ ತೊಡಗಿಸಿಕೊಂಡು ಕಲೆಯ ಗೆಲುವಿನ ಜೊತೆಗೆ ಉತ್ತಮ ಸಂಸ್ಕಾರಯುತ ವ್ಯಕ್ತಿತ್ವದ ನಿರ್ಮಾಣಕ್ಕೂ ಕಲೆ ಪ್ರೇರಣೆಯಾಗುತ್ತದೆ, ಎಂದು ಉಜಿರೆ, ಶ್ರೀ ಧ.ರ್ಮ ಕಾಲೇಜಿನ ಯಕ್ಷಗಾನ ಕಲಾ ಕೇಂದ್ರದ ತರಬೇತುದಾರರಾದ ಅರುಣ್ ಕುಮಾರ್ ಧರ್ಮಸ್ಥಳ ಹೇಳಿದರು.
ಉಜಿರೆ, ಶ್ರೀ ಧ.ಮ. ಕಾಲೇಜು ಇಲ್ಲಿನ ಯಕ್ಷಗಾನ ಕಲಾ ಕೇಂದ್ರದಲ್ಲಿ ಆಯೋಜಿಸಿದ್ದ “ವೇಷ-ಭೂಷಣಗಳ ಪರಿಚಯ” ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಂಗಿಕ ಅಭಿನಯ, ಆಹಾರ್ಯ ಅಭಿನಯ, ವಾಚಿಕ ಅಭಿನಯ, ಸ್ವಭಾವ ಇದೆಲ್ಲ ಒಂದು ಪಾತ್ರವನ್ನು ಕಟ್ಟಿಕೊಡುತ್ತವೆ ಎಂದು ಹೇಳಿ ಮಕ್ಕಳಿಗೆ ವೇಷ- ಭೂಷಣಗಳ ಪರಿಚಯ ಮಾಡಿಸಿದರು.
ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಸುಧೀರ್ ಕೆ ವಿ, ಯಕ್ಷಗಾನ ಕಲಾ ಕೇಂದ್ರದ ಸ್ಟಾಫ್ -ಇನ್ -ಚಾರ್ಜ್ ಶಶಾಂಕ್, ನೃತ್ಯ ತರಬೇತುದಾರರಾದ ವಿದುಷಿ ಚೈತ್ರಾ ಭಟ್ ಹಾಗೂ ರಂಗ ತರಬೇತಿ ಕೇಂದ್ರದ ಸ್ಟಾಫ್ -ಇನ್ -ಚಾರ್ಜ್ ಪ್ರವೀಣ್ ಉಪಸ್ಥಿತರಿದ್ದರು.
ಎಸ್. ಡಿ. ಎಂ. ಕಲಾ ಕೇಂದ್ರದ ವಿದ್ಯಾರ್ಥಿಗಳಾದ ಸೌರವ್ ಸ್ವಾಗತಿಸಿ, ಮುಕ್ತಿಶ್ರೀ ಎಂ. ವಂದಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
p>