ಬೆಳ್ತಂಗಡಿ :ಬೆಳ್ತಂಗಡಿಯಿಂದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್ ಮತ್ತು ಉಜಿರೆ ರಬ್ಬರ್ ಸೊಸೈಟಿ ಇದರ ನೇತೃತ್ವದಲ್ಲಿ ಇಂದು(ಜ.10ರಂದು) ಬೆಂಗಳೂರಿನಲ್ಲಿ ತೋಟ ಗಾರಿಕೆ ಸಚಿವ ಮುನಿರತ್ನ ರವರನ್ನು ಭೇಟಿ ಮಾಡಿ ರಬ್ಬರ್ ಕೃಷಿಕರ ಸಮಸ್ಯೆಯನ್ನು ಮನವರಿಕೆ ಮಾಡಿ ಸಮಸ್ಯೆಗಳನ್ನು ಮಂತ್ರಿಗಳ ಗಮನಕ್ಕೆ ತರಲಾಯಿತು. ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಬೆಂಬಲ ಬೆಲೆ ಘೋಷಿಸುವಂತೆ ಮನವಿಸಲಾಯಿತು. ಈ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದೆಂದು ಸಚಿವ ಮುನಿರತ್ನ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ , ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂ. ಶಾಜಿ ಮಾತ್ಯು ಕೆ ಎಸ್ ಎಂ ಸಿ ಎ ಅಧ್ಯಕ್ಷ ಬಿಟ್ಟಿ ನೆಡುನಿಲಂ, ಕೆ ಎಸ್ ಎಂ ಸಿ ಎ ಪ್ರಧಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ, ಕೆ ಎಸ್ ಎಂ ಸಿ ಎ ಪಿ ಓ ಸೇಬಾಸ್ಟಿನ್ ಪಿ ಸಿ ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ್ ಬೀಡೆ, ಉಪಾಧ್ಯಕ್ಷರಾದ ಅನಂತ್ ಭಟ್ ಮಚ್ಚಿ ಮಲೆ, ರಾಜು ಶೆಟ್ಟಿ, ಸಿ ಇ ಓ ರಬ್ಬರ್ ಸೊಸೈಟಿ ಪದ್ಮ ಗೌಡ ಉಪಸ್ಥಿತರಿದ್ದರು.
p>