ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಮೂರನೇ ವರ್ಷದ ಪದಗ್ರಹಣ ಸಮಾರಂಭ ಜ.4 ರಂದು ಸಂತ ಜಾನರ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಕೊಕ್ಕಡದ ಜೇಸಿ ಸೆನೆಟರ್ ಜಿತೇಶ್ ಎಲ್ ಪಿರೇರಾ ಹಾಗೂ ಅವರ ತಂಡದವರು ಅಧಿಕಾರ ಸ್ವೀಕಾರ ಮಾಡಿದರು.
ಉಜಿರೆ ಶ್ರೀ. ಧ. ಮಂ. ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ದಿವ ಕೊಕ್ಕಡ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿ ಮಾತನಾಡುತ್ತಾ ಯುವ ಜನರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವದಿಂದ ಬದುಕಲು ಸಕಲ ಪ್ರಯತ್ನ ಮಾಡಬೇಕು. ಮಕ್ಕಳು ಹೆಚ್ಚು ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಕ್ಷರ ದೀವಿಗೆ ಆರಂಭೋತ್ಸವ ಅಂಗವಾಗಿ ಸ್ಥಳೀಯ ಶಾಲಾ ಮಕ್ಕಳ ಜ್ಞಾನ ವರ್ಧನೆಗೆ ನೆರವಾಗುವ ವೈವಿಧ್ಯಮಯ ಪುಸ್ತಕಗಳನ್ನು ವಿತರಿಸಲಾಯಿತು.
ಜೇಸಿ ವಲಯದ ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅವರು ಪದಪ್ರದಾನ ಅಧಿಕಾರಿಯಾಗಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೆಳ್ತಂಗಡಿ ಡಾ. ಕುಶಾಲಪ್ಪ ಎಸ್, ಕೆ.ಯು. ಕರ್ಕೇರಾ, ರಫಾಯಲ್ ಸ್ಟ್ರೆಲ್ಲಾ, ಕು.ಚಂದನಾ ಆಚಾರ್ಯ ರವರನ್ನು ಅಭಿನಂದಿಸಲಾಯಿತು.
ಸಮಾಜದಲ್ಲಿ ಉನ್ನತ ಸಾಧನೆಗೈದ ಡಾ. ದಿವ ಕೊಕ್ಕಡ , ಕೆ. ಶ್ರೀಧರ ರಾವ್ ಅವರಿಗೆ ಸನ್ಮಾನ ಮಾಡಲಾಯಿತು.
ಪದಾಧಿಕಾರಿಗಳಾದ ಜಸ್ವಂತ್ ಪಿರೇರಾ, ವಿಕ್ಟರ್ ಸುವಾರಿಸ್, ದೀಪಾ ವಿ., ಪ್ರತೀಕ್ಷಾ ಕೆ. ಶೆಟ್ಟಿ, ಅಪೂರ್ವ ಕೆ, ಯು. ನರಸಿಂಹ ನಾಯಕ್, ಹರಿಶ್ಚಂದ್ರ ಆಚಾರ್ಯ, ವಿದ್ಯೇಂದ್ರ, ಸಂತೋಷ ಕುಮಾರ್, ರಾಜಾರಾಮ, ಅಕ್ಷತ್ ರೈ, ರಾಮಕೃಷ್ಣ ಸುವರ್ಣ, ಮನೋರಮಾ, ಗಣೇಶ ಶೆಟ್ಟಿ, ಪಿ.ಟಿ. ಸೆಬಾಸ್ಟಿಯನ್, ಜೆಸಿಂತಾ ಡಿ ಸೋಜ, ಶ್ರೀನಿವಾಸ ಗೌಡ, ಹರೀಶ್, ಜಾನ್ಸನ್, ಜ್ಯೋತಿ ಹೆಬ್ಬಾರ್, ಕಾರ್ತಿಕ್, ಹರೀಶ್ ಕಳೆಂಜ, ಗಣೇಶ ಕೆ, ಜೋಸೆಫ್ ಪಿರೇರಾ, ಪ್ರಶಾಂತ್ ಸಿ.ಹೆಚ್, ಸವಿತಾ ಮುಂತಾದವರು ಉಪಸ್ಥಿತರಿದ್ದರು.
ವಿವಿಧ ಜೇಸಿ ಘಟಕಗಳ ಅಧ್ಯಕ್ಷರು, ಸಂಘ ಸಂಸ್ಥೆಗಳ ಪ್ರಮುಖರು ಗಣ್ಯರು ಶುಭ ಹಾರೈಸಿದರು.