ಬೆಳ್ತಂಗಡಿ: ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂಬ ಸಂದೇಶವನ್ನು ಸಾರುವ, ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಮಾದರಿಯಾಗಿರುವ ಚಲನಚಿತ್ರ ಮಿಸ್ ನಂದಿನಿ ಚಲನ ಚಿತ್ರ ಜ.6 ರಂದು ಬಿಡುಗಡೆಗೊಳ್ಳಲಿದೆ.
ಬೆಳ್ತಂಗಡಿ ತಾಲೂಕಿನ ಪ್ರತಿಭೆ, ಕಾಂತಾರ ಸೇರಿದಂತೆ ಹಲವು ಚಿತ್ರ ಹಾಗೂ ನೃತ್ಯದಲ್ಲಿ ನಟಿಸಿ ಮನೆ ಮಾತಾಗಿರುವ ಸೃಷ್ಟಿ ಕೊಯ್ಯೂರು ವಿದ್ಯಾರ್ಥಿಯ ಪಾತ್ರದಲ್ಲಿ ದೊಡ್ಡ ರೋಲ್ ನಲ್ಲಿ ನಟಿಸಿದ್ದಾರೆ.
ನಾಯಕಿ ಪ್ರಿಯಾಂಕ ಉಪೇಂದ್ರ ರವರು ಹಳ್ಳಿಗೆ ವರ್ಗವಾಗಿ ಬರುವ ಸರಕಾರಿ ಶಿಕ್ಷಕಿಯ ಪಾತ್ರ ಮಾಡಿದ್ದಾರೆ.
ಮಿಸ್ ನಂದಿನಿ ವಿಭಿನ್ನವಾದ ಚಿತ್ರ, ನನಗೆ ಸಿಕ್ಕಿದ ಪಾತ್ರ ಕೂಡ ವಿಬಿನ್ನವಾಗಿದೆ. ತಾಲೂಕಿನ ಜನತೆ ಚಿತ್ರ ನೋಡಿ ಆಶೀರ್ವದಿಸಿ ಎಂದು ಸೃಷ್ಟಿ ಕೊಯ್ಯೂರು ಹೇಳಿದರು.
p>