ಗೇರುಕಟ್ಟೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣ ಕಚೇರಿ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ನಡೆಸುತ್ತಿರುವ ತಂಬಾಕು ವಿರುದ್ಧ ಜನಜಾಗೃತಿಗಾಗಿ ” ಗುಲಾಬಿ ಅಭಿಯಾನ ಕಾರ್ಯಕ್ರಮ” ಡಿ.29 ರಂದು ಮನ್ಶರ್ ಕಾಲೇಜು ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಗೇರುಕಟ್ಟೆ ಇದರ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಯೋಜನಾಧಿಕಾರಿ ಪುಂಡಲಿಕ ಎಂ ಲಕಾಟಿ ಅವರು ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಯಂತ್ರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸೋಶಿಯಲ್ ವೆಲ್ಫೇರ್ ಆಫೀಸರ್ ಶ್ರುತಿ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಹೈದರ್ ಮರ್ದಾಳ ಇವರು ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಚಟಗಳಿಗೆ ಬಲಿಯಾಗದೆ, ಅವರ ಸುರಕ್ಷತೆಗಾಗಿ ಕಾಲೇಜಿನಲ್ಲಿ ಕೈಗೊಂಡ ಸುರಕ್ಷಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮನ್ಶರ್ ಕಾಲೇಜ್ ನೂರು ಪ್ರತಿಶತ ತಂಬಾಕು ಮುಕ್ತವಾಗಿದೆ ಎಂದು ಘೋಷಿಸಿದರು.
ಸಾರ್ವಜನಿಕರಲ್ಲಿ ತಂಬಾಕು ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಕಾಲೇಜಿನ ನೂರು ಗಜ ಅಂತರದ ಅಂಗಡಿಗಳಿಗೆ ವಿದ್ಯಾರ್ಥಿಗಳಿಂದ ಗುಲಾಬಿ ಹೂವು ಕೊಡಿಸುವ ಮೂಲಕ, ಅಂಗಡಿಯಲ್ಲಿ ತಂಬಾಕು ಮಾರಾಟ ಹಾಗೂ ಸೇವನೆ ನಿಷೇಧದ ಬಗ್ಗೆ ಪ್ರೀತಿಯಿಂದ ಅಂಗಡಿ ಮಾಲೀಕರ ಮನವೊಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನ್ಶರ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಹೈದರ್ ಮರ್ದಾಳ ಇವರು ವಹಿಸಿಕೊಂಡಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಾ , ಪಿ. ಹೆಚ್. ಸಿ. ಓ ಶ್ರೀಮಾನ್ ರಕ್ಷಿತ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಲ್ಕೀಸ್ ಸಾಧಿಕ್ , ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.