ಸಮೃದ್ಧಿ ಕಾಂಪ್ಲೆಕ್ಸ್ ಕಾಲೇಜ್ ರಸ್ತೆ ಮಡಂತ್ಯಾರ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಮಡಂತ್ಯಾರು: ಅಭಯ ಹೆಲ್ತ್ ಕೇರ್ ಮಡಂತ್ಯಾರ್ , ಜೇಸಿಐ ಮಡಂತ್ಯಾರು ಹಾಗೂ ರೋಟರಿ ಕ್ಲಬ್ ಮಡಂತ್ಯಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಡಿ.22ರಂದು ಸಮೃದ್ಧಿ ಕಾಂಪ್ಲೆಕ್ಸ್ ಕಾಲೇಜ್ ರಸ್ತೆ ಮಡಂತ್ಯಾರು ಇಲ್ಲಿ ನಡೆಯಿತು.

ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ರೊ/ ರೊನಾಲ್ಟ್ ಸಿಕ್ವೇರಾ ಇವರು ಅಧ್ಯಕ್ಷತೆ ವಹಿಸಿದ್ದರು. ಪಾರೆಂಕಿ ಶ್ರೀ ಮಹೀಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಠಲಶೆಟ್ಟಿ ಮೂಡಯೂರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಹಾಜಿ ಅಬ್ದುಲ್ ಲತೇಬ್ ಸಾಹೇಬ್, ಜೇಸಿಐ ಮಡಂತ್ಯಾರಿನ ಅಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯಲ್ಕೆ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು. ಅಭಯ ಹೆಲ್ತ್ ಕೇರ್ ನ ಆಡಳಿತ ಅಧಿಕಾರಿ ಡಾ| ಶ್ರೀಹರಿ ಇವರು ಎಲ್ಲರನ್ನು ಸ್ವಾಗತಿಸಿದರು, ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ| ಹರ್ಷನಾರಾಯಣ ಶೆಟ್ಟಿ ಧನ್ಯವಾದಗೈದರು. ಈ ಸಂದರ್ಭದಲ್ಲಿ ಡಾ| ವಿದ್ಯಾ, ಜೇಸಿ ಮಡಂತ್ಯಾರಿನ ಕಾರ್ಯದರ್ಶಿ ಜೇಸಿ ವಿಕೇಶ್ ಮಾನ್ಯ, ನಿಕಟ ಪೂರ್ವಾಧ್ಯಕ್ಷರಾದ ಜೇಸಿ ತುಳಸಿದಾಸ್ ಪೈ, ಜೇಸಿ ಪ್ರಸನ್ನ ಶೆಟ್ಟಿ ಸದಸ್ಯರಾದ ಜೇಸಿ ಅಜಯ್ ಶೆಟ್ಟಿ ಜೇಸಿ ಪ್ರಶಾಂತ್ ಹಟ್ಟತೋಡಿ, ರೋಟರಿ ಕ್ಲಬ್ ಮಡಂತ್ಯಾರಿನ ಸದಸ್ಯರು, ಪದಾಧಿಕಾರಿಗಳು ಹಾಗೂ ಅಭಯ ಹೆಲ್ತ್ ಸೆಂಟರ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುಮಾರು ನೂರಕ್ಕೂ ಮಿಕ್ಕಿ ಜನರು ಭಾಗವಹಿಸುವುದರೊಂದಿಗೆ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here