ಬೆಳಾಲು: ವಿಶ್ವ ವಿಕಲ ಚೇತನ ದಿನಾಚರಣೆಯ ಅಂಗವಾಗಿ ಡಿ.21 ಗ್ರಾಮ ಪಂಚಾಯತ್ ಬೆಳಾಲು ಸಭಾಭವನದಲ್ಲಿ ವಿಕಲಚೇತನ ದಿನಾಚರಣೆ ಹಾಗೂ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ನೆರವೇರಿತು.
ಕಾರ್ಯಕ್ರಮದ ಅಧ್ಯಕತೆ ಹಾಗೂ ಉದ್ಘಾಟನೆಯನ್ನ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ನೆರವೇರಿಸಿದರು . ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾಮದ ಶಾಲಾ ಮುಖ್ಯೋ ಪಾಧ್ಯಾಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ತಾಲೂಕು ವಿಕಲಚೇತನರ ಸಂಯೋಜಕರು ಜಾನ್ ಬೆಪಸ್ಟ್ ಡಿಸೋಜ, ವಿಶೇಷ ಉಪನ್ಯಾಸಕರು ಗಳಾಗಿ ಶಿವಪ್ಪ ರಾಠೋಡ್ ವಿಕಲಚೇತನ ಸಹಾಯ ಸೌಲಭ್ಯ ಕಾನೂನು ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಏಳ್ಳುಗದ್ದೆ, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕರಾಜ್ , ಕಾರ್ಯದರ್ಶಿ ಮೋಹನ್ ಬಂಗೇರ, ಮತ್ತು ಗ್ರಾಮೀಣ ವಿಕಲಚೇತನರ್ ಸಂಯೋಜಕ ಈರಣ್ಣ ,ಹಾಗೂ ಗ್ರಾಮದ ಸಮಸ್ತ ವಿಕಲಚೇತನರು ಪಾಲಕರು, ಪಂಚಾಯತ್ ಸಿಬ್ಬಂದಿಗಳು ಭಾಗಿಯಾಗಿದ್ದರು, ಈ ಸಂದರ್ಭದಲ್ಲಿ ಬೆಳಾಲು ಶ್ರೀ ಕೃಷ್ಣ ಕ್ಲಿನಿಕ್ ನ ಡಾ. ಚೇತನ್ ಇವರನ್ನು ಸನ್ಮಾನಿಸಲಾಯಿತು.