ಶ್ರೀ ನಾಗಬ್ರಹ್ಮ ಸ್ವಾಮಿ ಕೊಜಪ್ಪಾಡಿ ಬ್ರಹ್ಮಕಲಶೋತ್ಸವದ ಸಮಿತಿ ರಚನೆ, ಪೂರ್ವಭಾವಿ ಸಭೆ

0

ಕಳಿಯ: ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ದೇವರಿಗೆ ಬ್ರಹ್ಮ ಕಲಶೋತ್ಸವವು ಫೆ.9 ಮತ್ತು ಫೆ.10ರಂದು ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ರಚನೆಗಾಗಿ ಪೂರ್ವಭಾವಿಯಾಗಿ ಸಾರ್ವಜನಿಕ ಸಭೆ ಡಿ.19ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಮುಗಳಿ ನಾರಾಯಣ ಭಟ್‌ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿರಾಗಿ ಚಿದಾನಂದ ಇಡ್ಯ, ಉಪಾಧ್ಯಕ್ಷರಾಗಿ ಕಳಿಯ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಬಾಲಕೃಷ್ಣ ಶೆಟ್ಟಿ ಹರ್ಮಾಡಿ, ರಾಮ್ ಪ್ರಸಾದ್ ಗುಂಪಾಲಾಜೆ, ಸತೀಶ್ ಪೂಜಾರಿ,ದಿವಾಕರ ಮೆದಿನ, ಕಾರ್ಯದರ್ಶಿ ಪ್ರತಿಭಾ ಶೆಟ್ಟಿ, ಕಿಶೋರ್ ಶೆಟ್ಟಿ ,ನಿತ್ಯಾನಂದ ಇಡ್ಯಾ, ಕೋಶಾಕಾರಿ ಜಯರಾಮ್ ಆಚಾರ್ಯ, ಗೌರವ ಸಲಹೆಗಾರಾಗಿ ಪೂವಪ್ಪ ಭಂಡಾರಿ, ರಾಮಪ್ಪ ಪಣೆಜಾಲು ದಿನಕರ ಬಂಗೇರ ಖಂಡಿಗ.ವಿಜಯ ಗೌಡ ನಾಳ, ಸುಧಾಕರ್ ಮಜಲು, ರಮೇಶ್ ಪಣೆಜಾಲು, ಹೊರಕಾಣಿಕೆ ಸಂಚಾಲಕರಾಗಿ ಜನಾರ್ದನ ಗೌಡ, ಸ್ವಾಗತ ಸಮಿತಿ ಸಂಚಾಲಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಅಚ್ಚುತ ಸಹ ಸಂಚಾಲಕಿ ನಿಕ್ಷೀತಾ, ಅಲಂಕಾರ ಸಮಿತಿಯ ಸಂಚಾಲಕರಾಗಿ ಪವನ್ ಕುಲಾಲ್, ಚಪ್ಪರ ಸಮಿತಿ ಸಂಚಾಲಕ ಹರೀಶ್ ಹರ್ಮಾಡಿ, ಆರ್ಥಿಕ ಸಮಿತಿ ಸಂಚಾಲಕರಾಗಿ ಆನಂದ ಶೆಟ್ಟಿ ಐಸಿರಿ, ಅನ್ನಸಂತರ್ಪಣೆ ಸಂಚಾಲಕ ಲಕ್ಷ್ಮಣ್ ಪೂಜಾರಿ, ಸಂಸ್ಕೃತಿ ಸಭಾ ಸಂಚಾಲಕರಾಗಿ ಸೌಮ್ಯ ನವೀನ್, ಸ್ವಚ್ಛತಾ ಸಮಿತಿ ಸಂಚಾಲಕರಾಗಿ ಮೀನಾಕ್ಷಿ ಕೃಷ್ಣಪ್ಪ ಆಯ್ಕೆ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಯಾವುದೇ ಜಾತಿ,ಮತ, ಧರ್ಮ ಬೇಧವಿಲ್ಲದೆ ಶ್ರೀ ನಾಗಬ್ರಹ್ಮ ಸ್ವಾಮಿಯ ಸೇವೆಯನ್ನು ಮಾಡೋಣ. ಹೊರಕಾಣಿಕೆ,ಅನ್ನದಾನ ಸೇವೆಯ ಬಗ್ಗೆ ಹೆಚ್ಚಿನ ಗಮನ ಕೊಟ್ಟರೆ ಬ್ರಹ್ಮ ಕಲಶೋತ್ಸವವು ಯಶಸ್ವಿಯಾಗುತ್ತದೆ ಎಂದರು.

ವೇದಿಕೆಯಲ್ಲಿ ಮುಗುಳಿ ನಾರಾಯಣ ಭಟ್, ಕಳಿಯ ಗ್ರಾ ಪಂ ಅಧ್ಯಕ್ಷ ಸುಭಾಷಿಣಿ ಗೌಡ, ಸದಸ್ಯ ದಿವಾಕರ, ಸುಧಾಕರ ಮಜಲು, ಶ್ರೀ ಕ್ಷೇ ಧ. ಗ್ರಾ.ಯೋ.ಮೇಲಿಚ್ಚಾರಕ ಅಚ್ಚುತ, ಚಿದಾನಂದ ಇಡ್ಯಾ ಸ್ವಾಗತಿಸಿ, ಟ್ರಸ್ಟಿ ಅಧ್ಯಕ್ಷ ಆನಂದ ಶೆಟ್ಟಿ, ಐಸಿರಿ ವಂದಿಸಿದರು.

p>

LEAVE A REPLY

Please enter your comment!
Please enter your name here