ಉಜಿರೆ : ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ 47 ನೇ ವರ್ಷದ ಮಹಾಸಭೆ ಡಿ.5 ರಂದು ದೇವಸ್ಥಾನ ಆಡಳಿತ ಮೊಕ್ತೇಸರ ವಾಸುದೇವ ಸಂಪಿಗೆತ್ತಾಯ ಅವರ ಗೌರವ ಉಪಸ್ಥಿತಿಯಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ವಿಘ್ನಶ್ ಧರಣಿ ಯವರ ಅಧ್ಯಕ್ಷತೆಯಲ್ಲಿ ಶ್ರೀಸದಾಶಿವ ದೇವಸ್ಥಾನ ಕಿರಿಯಾಡಿ ವಠಾರದಲ್ಲಿ ನಡೆಯಿತು.
ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿ ದೇವಸ್ಥಾನ ಆಡಳಿತ ಮೊಕ್ತೇಸರರಾದ ವಾಸುದೇವ ಸಂಪಿಗೆತ್ತಾಯರನ್ನು ಹಿಂದಿನ ಸಂಪ್ರದಾಯದಂತೆ ಮುಂದುರವರಿಸಲಾಯಿತು, ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರಂಜನ್ ‘ನಿಸರ್ಗ’ ಕಕ್ಕರಬೆಟ್ಟು ಕಾರ್ಯದರ್ಶಿಯಾಗಿ ಭಗೀರಥ ದೊಂಪದಪಲ್ಕೆ, ಕೋಶಾಧಿಕಾರಿಯಾಗಿ ರಮೇಶ್ ಗೌಡ ಕಿರಿಯಾಡಿ ಆಯ್ಕೆಯಾದರು.
ಇತರ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ಗಿರೀಶ್ ದೊಂಪದಪಲ್ಕೆ, ಜೊತೆ ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಗಾಂಧಿನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಶೇಖರ ನಿನ್ನಿಕಲ್ಲು, ಚಂದ್ರಕಾಂತ ಗೌಡ, ಕೃಷ್ಣಪ್ರಸಾದ್ ಎಂ., ತಾರನಾಥ, ಉಮೇಶ್ ಗೌಡ, ಮಾಧವ ಗೌಡ, ನಾರಾಯಣ ಕೆ., ವಿಠಲ ನಾಯ್ಕ, ಶ್ರೀಧರ ಶೆಟ್ಟಿ, ಈಶ್ವರ ಗೌಡ, ಕೇಶವ ಗೌಡ, ಶೈಲೇಶ್, ವಿಘ್ನೇಶ್, ಕೃಷ್ಣಪ್ಪ ನಾಯ್ಕ, ಬೇಬಿ ಪೂಜಾರಿ, ಕೃಷ್ಣಪ್ಪ ಭೀಮಗುಡ್ಡೆ, ಸದಾನಂದ, ಸತೀಶ್ ಗೌಡ ಕೆ. ಕೃಷ್ಣಪ್ಪ ಗೌಡ ಬರೆಮೇಲು, ಶ್ರೀಮತಿ ರಾಜೇಶ್ವರಿ ಚಂದ್ರಕಾಂತ ಗೌಡ ಹಾಗೂ ಗೌರವ ಸಲಹೆಗಾರರಾಗಿ ಧರ್ಣಪ್ಪಗೌಡ “ಧರಣಿ”, ಕೆ .ಬಾಬು ಗೌಡ, ಸೀತಾರಾಮ ಗೌಡ, ರುಕ್ಮಯ ಗೌಡ, ಶ್ರೀಧರ ಬಂಗೇರ, ಸಂಜೀವ ಗೌಡ ಪಾದೆ, ಕೊರಗಪ್ಪ ಗೌಡ,
ಪದ್ದಣ್ಣ ಗೌಡ ಓಡಲ, ಇವರೆಲ್ಲರನ್ನು ಸರ್ವಾನುಮತದಿಂದ ಆರಿಸಲಾಯಿತು.
ಚಂದ್ರಶೇಖರ ಸ್ವಾಗತಿಸಿ, ಕೆ.ಬಾಬು ಗೌಡ ವಂದಿಸಿದರು, ನಿರಂಜನ್ ಕಾರ್ಯಕ್ರಮ ನಿರೂಪಿಸಿದರು.