ಸೇಕ್ರೆಡ್ ಹಾರ್ಟ್ ಕಾಲೇಜಿನ ಮಹಿಳಾ ಮತ್ತು ಲಿಂಗ ಸೂಕ್ಷ್ಮತಾ ಘಟಕ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನ ಮಹಿಳಾ ಮತ್ತು ಲಿಂಗ ಸೂಕ್ಷ್ಮತಾ ಘಟಕ (Women & Gender Sensitivity Cell) ಇದರ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮ ವಿದ್ಯಾರ್ಥಿಗಳಿಗಾಗಿ ಡಿ.8 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೇಶವ ಟಿ.ಎನ್ ಲಿಂಗ ಸಮಾನತೆಯ ಬಗ್ಗೆ ಮಾತನಾಡಿದರು.ಅಸಮಾನತೆ ಅನ್ನುವುದು ಕ್ರಿಶ್ತಪೂರ್ವ ಕಾಲಘಟ್ಟ ದಿಂದಲೂ ನಮ್ಮ ಸಮಾಜಕ್ಕೆ ಶಾಪವಾಗಿ ಪರಿಣಮಿಸಿದೆ. ಇತಿಹಾಸವನ್ನು ಗಮನಿಸಿದರೆ ಶೀಲ ಎಂಬುದು ಹೆಣ್ಣಿಗೆ ಮಾತ್ರ ವಿಧಿಸಿರುವ ಕಟ್ಟಳೆಯಾಗಿದೆ. ಸತಿಪದ್ಧತಿಯಿಂದ ನಮ್ಮ ರಾಜರ ಆಳ್ವಿಕೆಯ ಕಾಲದಲ್ಲಿ ಸಾಕಷ್ಟು ಮಹಿಳೆಯರು ಅಸುನೀಗಿದರು. ಈಗಲೂ ಅಡುಗೆ ಮನೆಯ ಹೊಗೆಯ ಕಾರಣದಿಂದ ಹಲವಾರು ಮಹಿಳೆಯರು ಶ್ವಾಸಕೋಶದ ಸಮಸ್ಯೆಯಿಂದ ಅಸುನೀಗುತ್ತಾರೆ. ಲಿಂಗ ಅಸಮಾನತೆಯ ಭಾವನೆ ಅಳಿದು , ಸಮಾನ ಎಂಬ ಭಾವನೆ ಪರಸ್ಪರ ಬೆಳೆದು ಬರುವುದರೊಂದಿಗೆ ಹೊಸ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಈಗಿನ ಯುವಕ,ಯುವತಿಯರು ಯೋಚಿಸಬೇಕಾಗಿದೆ. ವೈಚಾರಿಕವಾಗಿ ಯೋಚನೆ ಮಾಡುವುದರೊಂದಿಗೆ ಮೌಡ್ಯಗಳನ್ನು ತೊರೆದು, ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್.ಎಂ. ಅವರು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಬೇಬಿ.ಎ.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಮೇರಿ ಮತ್ತು ಭಾರ್ಗವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಪ್ರಿಯಾ ನಿರ್ವಹಿಸಿದರು. ಭಾರ್ಗವಿ ವಂದಿಸಿದರು.

p>

LEAVE A REPLY

Please enter your comment!
Please enter your name here