ಉಜಿರೆ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಜೇಸಿ ಸಪ್ತಾಹ 2022 ‘ಆರಾಧನಾ’ಇದರ ಉದ್ಘಾಟನಾ ಮಾರಂಭವು ರತ್ನತ್ರಯ ಸಭಾಂಗಣದಲ್ಲಿ ನ. 26ರಂದು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷೆ ರೊ. ಮನೋರಮ ಭಟ್ ಜೇಸಿಐ ಅಂತಹ ಸಂಘಟನೆಗಳು ರಾಷ್ಟ್ರ ನಿರ್ಮಾಣದಲ್ಲಿ ಶ್ರೇಷ್ಠ ಕಾರ್ಯವನ್ನು ಮಾಡುತ್ತಾ ಇದೆ. ಉಜಿರೆ ಜೆಸಿಐಯು ಸಹ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಶ್ರೇಷ್ಠ ವ್ಯಕ್ತಿತ್ವಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಗಳು ಉಜಿರೆ ಜೆಸಿಐನ ಮೂಲಕ ನೆರವೇರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷರಾದ ಜೇಸಿ HGF ಪ್ರಶಾಂತ್ ಲಾಯಿಲ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎನ್ ದಿನೇಶ್ ಚೌಟ, ಮಾರ್ಗದರ್ಶಕರಾದ ಜೇಸಿ HGF ಬಿ ಸೋಮಶೇಖರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ HGF ಡಾ. ನವೀನ್ ಕುಮಾರ್ ಜೈನ್, ಯೋಜನಾ ನಿರ್ದೇಶಕರಾದ ಜೇಸಿ ಅನಿಕೇತನ ಹೆಗ್ಡೆ, ಕಾರ್ಯದರ್ಶಿಗಳಾದ ಜೇಸಿ ವಿಕಾಸ್ ರಾವ್, NSS ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ, ಜೂನಿಯರ್ ರೆಡ್ ಕ್ರಾಸ್ ವಿಭಾಗದ ಯೋಜನಾಧಿಕಾರಿಗಳಾದ ಡಾ. ಫ್ಲೇವಿಯ ಪೌಲ್ ಹಾಗೂ ಶ್ರೀಮತಿ ಕವನ ಶ್ರೀ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಜೆಸಿಐ ಅಧ್ಯಕ್ಷರಾದ ಜೇಸಿ HGF ದೀಕ್ಷಿತ್ ರೈ ವಹಿಸಿದ್ದರು.
ಪೂರ್ವಾಧ್ಯಕ್ಷರಾದ ಜೇಸಿ ಮಹೇಶ್ ಶೆಟ್ಟಿ ಅಭ್ಯಾಗತರನ್ನು ವೇದಿಕೆಗೆ ಆಹ್ವಾನಿಸಿದರು, ಜೇಸಿ ಕವನಶ್ರೀ ಜೈನ್ ಜೇಸಿವಾಣಿ ವಾಚಿಸಿದರು ಹಾಗೂ JJC ಅವನಿ ಹೆಬ್ಬಾರ್ ಉದ್ಘಾಟಕರನ್ನು ಸಭೆಗೆ ಪರಿಚಯಿಸಿದರು.ಪೂರ್ವ ಅಧ್ಯಕ್ಷರುಗಳಾದ ಜೇಸಿ ರಘುರಾಮ ಶೆಟ್ಟಿ ಹಾಗೂ ಜೇಸಿ HGF ಡಾ. ಬಿಎ ಕುಮಾರ ಹೆಗ್ಡೆ ಸಹಕರಿಸಿದರು.