ಬೆಳ್ತಂಗಡಿ: ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಿತ್ವಿಕ್ ಕೆ.ಪಿ ಯವರು ಇತ್ತೀಚೆಗೆ ಮಡಿಕೇರಿಯಲ್ಲಿ ಕಲಾ ಭುವಿ ಮಾರ್ಷಲ್ ಆರ್ಟ್ಸ್ ಆಯೋಜಿಸಿದ್ದ ಕರಾಟೆ ಕೊಡಗು ಕಪ್ 2022ರಲ್ಲಿ 14 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ಕರಾಟೆ ಕೊಡಗು ಕಪ್ 2022 ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಹಾಗೂ ಇತ್ತೀಚೆಗೆ ಕಳಸದ ನಾಟ್ಯ ವಿನೋದ ಕಲಾ ತಂಡ ಇವರು ನಡೆಸಿದ ರಾಜ್ಯ ಮಟ್ಟದ ಜೋಡಿ ನೃತ್ಯ ಸಾರ್ವಜನಿಕ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಿತ್ವಿಕ್ ಕೆ.ಪಿ ಹಾಗೂ ವಂಶಿಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾರ್ವಜನಿಕ ವಿಭಾಗದಲ್ಲಿ ಸೋಲೋ ಡ್ಯಾನ್ಸ್ ನಲ್ಲಿ ತೃತೀಯ ಸ್ಥಾನ, ಜೆಸಿಐ ಮಡಂತ್ಯಾರು ಆಯೋಜಿಸಿದ ಜೋಡಿ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ, ಆಮಂತ್ರಣ ದವರು ನಡೆಸಿದ ಜೋಡಿ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜಾನಪ್ ನೃತ್ಯ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬೆಳ್ತಂಗಡಿಯ ಪ್ರಶಾಂತ್ ಕೆ ಮತ್ತು ವಿದ್ಯಾ ದಂಪತಿಯ ಪುತ್ರ.