ಯಾತ್ರಾಸ್ಥಳಗಳು

1.ಚಾರುಮುಡಿ ಎಂಬ ಚೆಲುವಿನ ಚಿತ್ತಾರ

ಭೂರಮೆ ಬರೆದ ಚೆಲುವಿನ ಚಿತ್ತಾರ ದಂತಿರುವ ಚಾರ್ಮಾಡಿ ಘಾಟಿಯ ರುದ್ರ ರಮಣೀಯ, ನಯನ ಮನೋಹರ ದೃಶ್ಯಗಳನ್ನು ಕಾಣಲು ಎರಡು ಕಣ್ಣು ಸಾಲದು. ಇಲ್ಲಿ ಸೌಂದರ್ಯವಿದೆ, ಭಯಾನಕತೆ ಇದೆ, ಇಬ್ಬನಿಯ ತಬ್ಬುಗೆ ಇದೆ, ಕ್ಷಣ ಕ್ಷಣವೂ ಪ್ರಪಾತಕ್ಕೆ ಬೀಳುವ ಅಪಾಯದಲ್ಲೂ ರೋಚಕತೆ ಇದೆ. ಬನ್ನಿ. ಹೊಸ ಲೋಕಕ್ಕೆ.ಹೀಗೆ ಚಾರ್ಮಾಡಿ ಮೂಲಕ ಹೋಗುವವರು ಸುಮ್ಮನೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಿರಿ.

2.ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನ   

ಶ್ರೀ ಸೂರ್ಯನಾರಾಯಣ ದೇವಸ್ಥಾನ ಗುರುವಾಯನಕೆರೆಗೆ ಹೋಗುವ ಮಾರ್ಗದಲ್ಲಿದೆ.

3.ನವುಂಡ ಶ್ರೀ ನಾಗಬ್ರಹ್ಮ ದೇವಸ್ಥಾನ;

ಬೆಳ್ತಂಗಡಿ- ಮಂಗಳೂರು ರಸ್ತೆಯ ಮಡಂತ್ಯಾರು ಎಂಬಲ್ಲಿಂದ ಮೂರು ಕಿ.ಮೀ ದೂರದಲ್ಲಿ ನವುಂಡ ಶ್ರೀ ನಾಗಬ್ರಹ್ಮ ದೇವಸ್ಥಾನ ವಿದೆ.

4. ಕಾಜೂರಿನ ಉರೂಸ್

ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ;

ಮೇಲಂತಬೆಟ್ಟು ಗ್ರಾಮದ ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸುಮಾರು ಐನೂರು ವರ್ಷಗಳ ಇತಿಹಾಸ ವಿದೆ.

5.ಕುಕ್ಕುಜೆ ಜಲಪಾತ;

ಬೆಳ್ತಂಗಡಿ ತಾಲೂಕು ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ಕುಕ್ಕುಜೆ ಜಲಪಾತ ಪ್ರಕೃತಿ ರಮಣೀಯ ಸ್ಥಳವಾಗಿದೆ. ಬೆಳ್ತಂಗಡಿ-ಕಾರ್ಕಳ ರಾಜ್ಯ ಹೆದ್ದಾರಿಯ ನಾರಾವಿ ಸಮೀಪದ ಕುಕ್ಕುಜೆ ಎಂಬಲ್ಲಿಂದ ಸುಮಾರು 5 ಕಿ.ಮೀ ದೂರದಲ್ಲಿ ಈ ಸುಂದರ ಜಲಪಾತವಿದೆ. ಎತ್ತರವಾದ ಗುಡ್ಡದಿಂದ ಧುಮುಕುತ್ತಿರುವ ಈ ಜಲಪಾತ ಕಣ್ಣಿಗೆ ತಂಪನ್ನು ನೀಡುವುದರೊಂದಿಗೆ ವಿಶ್ರಾಂತಿಧಾಮವಾಗಿಯೂ ಹೊರಹೊಮ್ಮಿದೆ. ಇದೊಂದು ಪ್ರೇಕ್ಷಣೀಯ ಸ್ಥಳವಾಗಿದ್ದು, ತಿಂಗಳಿಗೆ ನೂರಾರು ಮಂದಿ ಈ ಸ್ಥಳಕ್ಕೆ ಆಗಮಿಸಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ.

6.ಕಲ್ಲರಬ್ಬಿ ಜಲಪಾತ (ಬಂದಾರು ಗ್ರಾಮ)

ಬೆಳ್ತಂಗಡಿ-ಬೈಪಾಡಿ ಮಾರ್ಗವಾಗಿ ಕುಂಟಾಲಪಲ್ಕೆ ಶಾಲೆಯ ಬಳಿ ಬಂದಾಗ ಕಲ್ಲರಬ್ಬಿ ಎಂಬ ಪ್ರಕೃತಿದತ್ತ ಜಲಪಾತ ನಮ್ಮನ್ನು ಸೆಳೆಯುತ್ತದೆ. ಅಲ್ಲಿ ಸಂಚರಿಸುವ ಎಲ್ಲರನ್ನು ತನ್ನತ್ತ ಸೆಳೆಯುವ ಈ ಜಲಪಾತ ಪ್ರವಾಸಿಗರ ಮನಸ್ಸನ್ನು ತಣಿಸಿದೆ.

7.ಬಂದಾರಿನ ಶಾಂತಿನಾಥ ಸ್ವಾಮಿ ಬಸದಿ;

ಕರಾವಳಿ ಕರ್ನಾಟಕದ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ಹಿಂದುಳಿದಿರುವ ಬಂದಾರು ಗ್ರಾಮದಲ್ಲಿರುವ ಬೈಪಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯು 800 ವರ್ಷಗಳ ಇತಿಹಾಸವುಳ್ಳ ಪುರಾತನವೂ, ಶಿಲಾಮಯವೂ ಆದ ಜಿನಮಂದಿರವಾಗಿದೆ. ಅತ್ಯಂತ ಶಿಥಿಲವಾಗಿದ್ದ ಈ ಬಸದಿಯು ಶಿಲಾಮಯ ಭಾಗದ ಪುನರ್ ನಿರ್ಮಾಣವು ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ನಡೆದಿದೆ.

8.ತೋರ್ಪು ಜಲಪಾತ ಹೊಸಂಗಡಿ;

ತಾಲೂಕಿನ ಹೊಸಂಗಡಿ ಗ್ರಾಮದ ಫಲ್ಗುಣಿ ನದಿಯು ಗ್ರಾಮದ ಪೇರಿ ಎಂಬಲ್ಲಿ ಅತ್ಯಂತ ರುದ್ರರಮಣೀಯವಾಗಿ ಹರಿಯುತ್ತಾಳೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಈತೋರ್ಪು ಜಲಪಾತವು ಸುತ್ತಲುಕಾಡು ಗುಡ್ಡಗಳಿಂದ ಕೂಡಿದೆ. ಕಲ್ಲಿನ ಸಂದುಗಳಿಂದ ಹರಿಯುವ ನೀರು ದೂರಕ್ಕೆ ಹಾಲಿನ ನೊರೆಯಂತೆ ಕಾಣುತ್ತದೆ.
ಈ ಜಲಪಾತವು ಬೆಳ್ತಂಗಡಿಯಿಂದ 28 ಕಿ.ಮೀ ದೂರದಲ್ಲಿದೆ.

9.ಶ್ರೀ ಉಮಾಮಹೇಶ್ವರ ದೇವಸ್ಥಾನ ಮಲೆಂಗಲ್ಲು

ಬೆಳ್ತಂಗಡಿ ತಾಲೂಕಿನ ಮಲೆಂಗಲ್ಲಿನಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಹೋಗಲು ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯಲ್ಲಿ ಕುಪ್ಪೆಟ್ಟಿ ನಿಂದ ಬಂದಾರಿಗೆ ಹೋಗುವ ದಾರಿಯಲ್ಲಿ ಕ್ರಮಿಸಬೇಕು. ಗಣಪತಿ ಗುಡಿ, ಪಂಜುರ್ಲಿ ದೈವ, ನಾಗನಮೂರ್ತಿ ಮತ್ತಿತರ ದೇವರ ವಿಗ್ರಹಗಳ ಜೊತೆ ಅತ್ಯಂತ ಅಪರೂಪದ ಶಿವಪಾರ್ವತಿ ವಿಗ್ರಹವೂ ಇಲ್ಲಿದೆ.

ಧರ್ಮಸ್ಥಳ;

ಧರ್ಮಸ್ಥಳ  ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು.ಸುಮಾರು ಏಳು ನೂರು ವರುಷಗಳ ಇತಿಹಾಸ ಇದೆ.

ಮಂಗಳಗಿರಿ ಕ್ಷೇತ್ರದ ಮಹಿಮೆ
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್
ತತ್ವದಂ ದರ್ಶಿತಂ ಯೇನ ತಸ್ಮೈಶ್ರೀ ಗುರವೇ ನಮಃ
ಆಧ್ಯಾತ್ಮಿಕ ಚಿಂತನೆ, ಬದುಕಿನ ಜಂಜಾಟದಲ್ಲಿ ಸತ್ಸಂಗತವಾಗಿ ಇರುವುದೊಂದೇ ದೈವದೇವರುಗಳ ಅನುಗ್ರಹ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲೆನಾಡು ತಪ್ಪಲಿನ ಬೆಟ್ಟಗುಡ್ಡಗಳಿಂದ ಕೃಷಿ ಕೂಲಿ ಕಾರ್ಮಿಕರಿಂದ ಕೂಡಿದ ಪುಟ್ಟ ಊರು ಮುಂಡೂರು ಇಲ್ಲಿ ಗ್ರಾಮದೇವತೆಯಾಗಿ ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಪೂಜಿಸಲ್ಪಡುತ್ತಿದ್ದಾರೆ. ಅಂತೆಯೇ ಶ್ರೀ ರಾಜೀವ ಇವರ ಭಕ್ತಿಗೆ ಒಲಿದು ಬಂದ ಶ್ರೀ ಕಲ್ಲುರ್ಟಿ ತಾಯಿಯು ಶ್ರೀ ಮೂಕಾಂಬಿಕೆಯ ಅನುಗ್ರಹದೊಂದಿಗೆ ದೈವ ಸ್ವರೂಪಿಣಿಯಾಗಿ ಆರಾಧಿಸಲ್ಪಡುತ್ತಿದ್ದಾರೆ. ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಮಹಾಕಾಳಿ ಸ್ವರೂಪಿಣೆಯಾದ ದೇವಿಯು ದುಷ್ಟ ಸಂಹಾರಕ್ಕಾಗಿ ವರಾಹಿ ಮಂತ್ರಮೂರ್ತಿಯಾಗಿ ದೈವತ್ವ ತಾಳಿ ಶ್ರೀ ಮಹಾಲಕ್ಷ್ಮೀ ಸ್ವರೂಪಿಣಿಯಾದ ದೇವಿಯು ಸತ್ಯಧರ್ಮ ರಕ್ಷಣೆಗಾಗಿ ನಾಗಕಲ್ಲುರ್ಟಿಯಾಗಿ ದೈವತ್ವ ತಾಳಿ ಶ್ರೀ ಮಹಾಲಕ್ಷ್ಮೀ ಸ್ವರೂಪಿಣಿಯಾದ ದೇವಿಯು ಸತ್ಯಧರ್ಮ ರಕ್ಷಣೆಗಾಗಿ ನಾಗಕಲ್ಲುರ್ಟಿಯಾಗಿ ದೈವತ್ವ ತಾಳಿ ಶ್ರೀ ಮಹಾಸರಸ್ವತಿ ಸ್ವರೂಪಿಣೆಯಾದ ದೇವಿಯು ಭಕ್ತರ ಸಂಕಷ್ಟಗಳ ಪರಿಹಾರಕ್ಕಾಗಿ ಶಕ್ತಿ ದೇವತೆಯಾಗಿ ದೈವತ್ವ ತಾಳಿ ಮೂರು ಶಕ್ತಿಗಳು ಒಂದಾಗಿ ನೆಲೆಯಾಗಿದ್ದೇವೆ.
ತಮ್ಮನ್ನು ನೆಲಗೊಳಿಸಿ, ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಾ ಈ ಸ್ಥಳದಲ್ಲಿ ಅಭಯ ನೀಡುತ್ತೇವೆ ಎನ್ನುವ ಪ್ರಕಾರ ಸುದರ್ಶನ ಹೋಮ, ವಾಸ್ತು ಹೋಮ, ಅಘೋರ ಹೋಮ, ಹವನಾದಿಗಳಿಂದ ಸ್ಥಳ ಶುದ್ಧಿಗೊಂಡು ಸನ್ನಿಧಿಗೆ ಬಂದ ಭಕ್ತಾಧಿಗಳಿಗೆ ಅಭಯದಾನ ನೀಡುತ್ತಾ ಈಗ ಊರ-ಪರವೂರ ಹೊರ ರಾಜ್ಯಗಳಿಂದಲೂ ಭಕ್ತಾದಿಗಳನ್ನು ಆಕರ್ಷಿಸುತ್ತಾ ಅದರ ಇಷ್ಟಾರ್ಥಗಳನ್ನು ಶೀಘ್ರವಾಗಿ ನೆರವೇರಿಸುತ್ತಾ ಒಂದು ಪುಣ್ಯಸ್ಥಳವಾಗಿ ಶ್ರೀ ನಾಗಕಲ್ಲುರ್ಟಿ ದೈವ ಕ್ಷೇತ್ರವಾಗಿ ಮೂರು ಶಕ್ತಿಗಳು ಒಂದಾದ ಏಕೈಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಅದೇ ರೀತಿ ಶ್ರೀ ನಾಗಬ್ರಹ್ಮದೇವ, ಶ್ರೀ ನಾಗಯಕ್ಷಿ, ನಾಗನಾಗಿಣಿ ಧೂಮ್ರ-ಧೂಮವತಿ, ಗುಳಿಗ ಮತ್ತು ವಿಷ್ಣು ಮಾಯೆ ಶಕ್ತಿಗಳಿವೆ. ನಾಗದೋಷ ಇದ್ದ ಭಕ್ತಾಧಿಗಳು ಕ್ಷೇತ್ರಕ್ಕೆ ಬಂದು ಹರಕೆ ತೀರಿಸಿ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರವಾದ ಅನೇಕ ನಿದರ್ಶನಗಳಿವೆ. ಅದೇ ರೀತಿ ’ನಂಬಿನಕ್ಲೆಗ್ ಇಂಬು’ (ನಂಬಿದವರಿಗೆ ರಕ್ಷಣೆ) ಶ್ರೀ ನಾಗಕಲ್ಲುರ್ಟಿ ತಾಯಿಯ ಅಭಯ ದಿನದಿಂದ ದಿನಕ್ಕೆ ಅಪಾರ ಭಕ್ತ ಜನ ಸಮೂಹ ಊರ-ಪರಮವೂರ ಹೊರ ರಾಜ್ಯಗಳಿಂದಲೂ ಜಾತಿಮತ ಧರ್ಮ ಬೇಧ-ಭಾವವಿಲ್ಲದೆ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ತಾಯಿಯನ್ನು ಭಕ್ತಿಯಿಂದ ಪ್ರಾರ್ಥಿಸಿದ್ದಲ್ಲಿ ಶೀಘ್ರದಲ್ಲಿ ಇಷ್ಟಾರ್ಥ ಸಿದ್ಧ ನೆರವೇರಿಸ ಎಷ್ಟೊ ಉದಾಹರಣೆಗಳಿವೆ. ಮಾಂಗಲ್ಯ ಭಾಗ್ಯ, ಸಂತಾನ ಪ್ರಾಪ್ತಿ ಉದ್ಯೋಗ, ವ್ಯವಹಾರ, ಆರೋಗ್ಯವೃದ್ದಿ, ಭೂಮಿ ವಿವಾದ ಪ್ರೇತಭಾಧೆ ನಿವಾರಣೆಯಾದ ಘಟನೆಗಳಿವೆ. ಕುಡಿತದ ದುರಾಭ್ಯಾಸದಿಂದ ದೂರ ಇರಬೇಕೆನ್ನುವ ಭಕ್ತರಿಗೆ ಸೂಕ್ತ ಪರಿಹಾರ ದೊರೆಯುತ್ತದೆ.
ಶ್ರೀ ಕ್ಷೇತ್ರದಲ್ಲಿ ಬಿಂಬ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ನಡೆದ ನಂತರ ಗರ್ಭಗುಡಿಯ ಒಳಗೆ ಶ್ರೀ ನಾಗಕಲ್ಲುರ್ಟಿಯ ಬಿಂಬದ ಬಲಭಾಗದ ಗೋಡೆಯಲ್ಲಿ ಉತ್ತರಾಭಿಮುಖವಾಗಿ ಶ್ರೀ ಮಹಾಗಣಪತಿ ದೇವರ ಬಿಂಬವು ಮೂಡಿ ಬಂದಿದೆ. ದಿನಂಪ್ರತಿ ಬೆಳಿಗ್ಗೆ ಗಣಪತಿ ದೇವರಿಗೆ ಪಂಚಕಜ್ಜಾಯ ಸೇವೆ ಜರಗುತ್ತದೆ. ಭಕ್ತಾಧಿಗಳು ಗಣಪತಿ ದೇವರಲ್ಲಿ ತಮ್ಮ ಇಷ್ಟಾರ್ಥವನ್ನು ಸಂಕಲ್ಪ ಮಾಡಿದಲ್ಲಿ ಗಣಪತಿ ದೇವರ ಅನುಗ್ರಹ ಪ್ರಾಪ್ತಿಯಾಗುವುದು.
ಶ್ರೀ ಕ್ಷೇತ್ರದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುರೋಹಿತರಾದ ಮೂರ್ತಿ ಕಾಳೀದಾಸ ಭಟ್ ಇವರ ನೇತೃತ್ವದಲ್ಲಿ ೨೭.೨.೨೦೧೩ರಂದು ನವಚಂಡಿಕಯಾಗವು ಬಹಳ ವಿಜೃಂಭಣೆಯಿಂದ ಜರಗಿತು. ಹಾಗೂ ಅದೇ ದಿನ ಪುರೋಹಿತರಿಂದ ಶ್ರೀ ಕ್ಷೇತ್ರಕ್ಕೆ ’ಮಂಗಳಗಿರಿ’ ಎನ್ನುವ ನಾಮಾಂಕಿತ ಆಯಿತು. ಪರಮಪೂಜ್ಯ ಶ್ರೀ ಗಣೇಶ್ ಗುರೂಜಿ ಕೊಲ್ಲುರು, ಶ್ರೀ ಮಾತಾ ಮಾತಾಂಗಿ ಗುರುಶಿಷ್ಯ ವೃಂದ, ಊರ-ಪರವೂರ ಭಕ್ತಾಧಿಗಳ ಸಹಕಾರದಿಂದ ಶ್ರೀ ಕ್ಷೇತ್ರದಲ್ಲಿ ೧೭:೧೨:೧೩ರಂದು ಶ್ರೀ ಸದಗುರು ನಿತ್ಯಾನಂದ ಸ್ವಾಮಿಗಳ ಪಾದ ಪ್ರತಿಷ್ಠೆಯು ಗುರೂಜಿಯವರ ಮಾರ್ಗದರ್ಶನದಲ್ಲಿ ಜರಗಿತು. ಇವೆಲ್ಲವೂ ಶ್ರೀ ಕ್ಷೇತ್ರದಲ್ಲಿ ಕಂಡುಬರುವ ಗುರುಮಹಿಮೆ.
ಇನ್ನು ಇಲ್ಲಿ ಪ್ರತಿನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಮಹಾಪೂಜೆ ಪ್ರತಿ ಆದಿತ್ಯವಾರ ಬೆಳಿಗ್ಗೆ ೧೦ ಗಂಟೆಗೆ ಸರಿಯಾಗಿ, ಶ್ರೀ ನಾಗಬ್ರಹ್ಮ ದೇವರಿಗೆ ನಾಗತಂಬಿಲ, ಕ್ಷೀರಾಭಿಷೇಕ, ಸೀಯಾಳಭಿಷೇಕ (ಅಮವಾಸ್ಯೆ, ಚೌತಿ ಹಾಗೂ ನವರಾತ್ರಿ ಹೊರತು ಪಡಿಸಿ) ಹರಕೆ, ಅಗೇಲು ಸೇವೆ ನಡೆಯುತ್ತದೆ. ಪ್ರತಿವರ್ಷವು ನಾಗರಪಂಚಮಿ, ಗಣೇಶ ಚತುರ್ಥಿ, ನವರಾತ್ರಿ ಉತ್ಸವ ಹಾಗೂ ನೇಮೋತ್ಸವವು ಊರ ಪರವೂರ ಸದ್ಭಕ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರಗುತ್ತದೆ. ಅದೇ ರೀತಿ ಪ್ರತಿ ಆದಿತ್ಯವಾರ ಸಂಜೆ ೭ ಗಂಟೆಗೆ ಸರಿಯಾಗಿ ಶ್ರೀ ನಾಗಾಂಬಿಕಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ.
ಶ್ರೀ ಕ್ಷೇತ್ರದಲ್ಲಿ ಇನ್ನು ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಜರಗಲಿರುವುದರಿಂದ ಭಗವದ್ಭಕ್ತರು ಕೈ ಜೋಡಿಸಿ ತನು-ಮನ-ಧನಗಳನ್ನಿತ್ತು ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ.
ಸಂಪರ್ಕಕ್ಕೆ : 8277260319, 9008385269
ಸುಕೇಶ್, ಬಿ.ಕಾಂ ವಿದ್ಯಾರ್ಥಿ
ಮಡಂತ್ಯಾರು ಸೆಕ್ರೆಡ್ ಹಾರ್ಟ್