Site icon Suddi Belthangady

ಚಾಕುವಿನಿಂದ ಇರಿದು ಕೊಲೆ

ಬೆಳ್ತಂಗಡಿ: ಮಹಿಳೆಯೋರ್ವರ ಗೆಳೆತನದ ವಿಚಾರವಾಗಿ ಕಾರ್ಕಳದ ವ್ಯಕ್ತಿಯೋರ್ವರನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಕಾರ್ಕಳದ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಮಂಗಳೂರು ಮೂಲದ ನವೀನ್‌ ಪೂಜಾರಿ.

ಕೊಲೆ ಆರೋಪಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನಿವಾಸಿ ಸಂಜೀವ ಗೌಡ ಎಂಬುವವರ ಪುತ್ರ ಪರೀಕ್ಷಿತ್‌ ಗೌಡ ( 44 ವ ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗ್ಗಿನ ಜಾವ ನವೀನ್‌ ಪೂಜಾರಿಯ ಮೃತ ದೇಹವು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು ಚೂರಿ ಇರಿತದಿಂದ ಗಾಯಗೊಂಡು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಪಕ್ಕದ ಸಿಸಿ ಟಿವಿಯನ್ನು ಪರೀಕ್ಷಿಸಿದಾಗ ಸತ್ಯಾಂಶ ತಿಳಿದು ಪರೀಕ್ಷಿತ್‌ ಎಂಬಾತನನ್ನು ಬಂಧಿಸಲಾಗಿದೆ.

Exit mobile version