ಕಲ್ಲೇರಿ: ಕುಪ್ಪೆಟ್ಟಿ-ಉಪ್ಪಿನಂಗಡಿ ಹೊಂಡಾಗುಂಡಿ ರಸ್ತೆಯ ಬಗ್ಗೆ ಸುದ್ದಿ ಬಿಡುಗಡೆ ಮುಖಪುಟದಲ್ಲಿ ಪ್ರಕಟಿಸಿದ “ಗುರುವಾಯನಕೆರೆಯಿಂದ ಪಿಲಿಗೂಡು ರಸ್ತೆ ವಾವ್ ವಾವ್, ಅಲ್ಪರ್ದ್ ಉಬರ್ ಮುಟ್ಟ ಅಯ್ಯಯ್ಯೋ ಯಾವ್ ಯಾವ್ ” ವರದಿ ಸಂಚಲನ ಉಂಟು ಮಾಡಿದ್ದು, ನಿನ್ನೆಯಷ್ಟೇ ವೀಡಿಯೋ ಶೂಟ್ ಕೂಡ ಮಾಡಲಾಗಿದೆ.
ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಕಲ್ಲೇರಿಯ ಶಿವಗಿರಿ ಸಮೀಪದ ಗರೋಡಿಯಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ. ಆದರೆ ಇದು ಕಣ್ಕಟ್ ನಾಟಕ ಆಗಿ,ಕೇವಲ ಒಂದೆರಡು ಕಡೆ ಗುಂಡಿ ಮುಚ್ಚಿದಂತೆ ಆಗಬಾರದು, ಎಲ್ಲಾ ಗುಂಡಿ ಮುಚ್ಚಲೇಬೇಕು, ಅಲ್ಲದೇ ಗುಂಡಿ ಮುಚ್ಚುತ್ತಿರುವ ರೀತಿ ನೊಡಿದ್ರೆ ಎರಡು ದಿನದಲ್ಲಿ ಮತ್ತೆ ರಸ್ತೆ ಪರಿಸ್ಥಿತಿ ಶೋಚನೀಯ ಆಗಬಹುದು, ಹೀಗಾಗಬಾರದು ಅಂತ ಜನರು ಆಗ್ರಹಿಸಿದ್ದಾರೆ.