ಬೆಳ್ತಂಗಡಿ: ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿಯ ವತಿಯಿಂದ ಮಂಗಳೂರಿನಲ್ಲಿ ನಡೆದ Value Award Ceremony ಕಾರ್ಯಕ್ರಮದಲ್ಲಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಕಾಶ್ ಸವಣಾಲು 1 ಸಿನೆಮಾ, 2 ಧಾರಾವಾಹಿ, 10 ಶಾರ್ಟ್ ಫಿಲ್ಮ್, 250 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ಸವಣಾಲು ಗ್ರಾಮದ ಗುತ್ತಿನಬೈಲು ದಿ. ಅಣ್ಣಿ ಪೂಜಾರಿ ಮತ್ತು ಲಲಿತಾರವರ ಪುತ್ರ. ಪ್ರಸ್ತುತ ಲಾಯಿಲ ಸಿರಿ ಮಿಲ್ಲೆಟ್ ಕೆಫೆಯಲ್ಲಿ ಮುಖ್ಯ ಬಾಣಸಿಗನಾಗಿ ದುಡಿಯುತ್ತಿದ್ದಾರೆ.
ಸಿನಿಮಾ, ಧಾರವಾಹಿ, ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ಪ್ರಕಾಶ್ ಸವಣಾಲು ಇವರಿಗೆ ಕಲಾರತ್ನ ಪ್ರಶಸ್ತಿ
