Site icon Suddi Belthangady

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ – ಅಧ್ಯಕ್ಷರಾಗಿ ಜೋಯಲ್ ಮೆಂಡೋನ್ಸ, ಉಪಾಧ್ಯಕ್ಷರಾಗಿ ಕಾಂತಪ್ಪ ಗೌಡ

ಮಡಂತ್ಯಾರು: ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ ಮಾ.3ರಂದು ನಡೆದ ಅಧ್ಯಕ್ಷ / ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಜಿ ಮಾಲಾಡಿ ತಾಲೂಕು ಪಂಚಾಯತ್ ಸದಸ್ಯ ಜೋಯೆಲ್ ಮೆಂಡೋನ್ಸ ಮತ್ತು ಉಪದ್ಯಕ್ಷರಾಗಿ ನಿವೃತ್ತ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿದ್ದ ಕಾಂತಪ್ಪ ಗೌಡ ಹಟ್ಟತ್ತೊಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ನಿರ್ದೇಶಕರಾಗಿ ಗೋಪಾಲಕೃಷ್ಣ ಕೆ., ಸುರೇಶ್ ಎಸ್., ಮಹಾಬಲ ಕೆ., ಧನಲಕ್ಷ್ಮಿ ಚಂದ್ರಶೇಖರ್, ಕಾಂತಪ್ಪ ಗೌಡ, ಕಿಶೋರ್ ಕುಮಾರ್ ಶೆಟ್ಟಿ , ಜೋಯಲ್ ಮೆಂಡೋನ್ಸ, ಅನಿತಾ ಪ್ರಿಯಾ ಲೋಬೋ ಹಾಗೂ ಗಣೇಶ್ ಮೂಲ್ಯ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿ ನಿಕಪೂರ್ವ ಅಧ್ಯಕ್ಷ ಅರವಿಂದ ಜೈನ್, ಪದ್ಮನಾಭ ಸಾಲಿಯಾನ್ ಮತ್ತು ಕುಮಾರ ನಾಯ್ಕಇವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿಯಾಗಿ ವಿಲಾಸ್ ರವರು ಭಾಗವಹಿಸಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜಾ ಉಪಸ್ಥಿತರಿದ್ದರು.

Exit mobile version