ಬೆಳಾಲು ಗ್ರಾಮ ಪಂಚಾಯತಿನಲ್ಲಿ ವಿಕಲ ಚೇತನರ ದಿನಾಚರಣೆ

0

ಬೆಳಾಲು: ಗ್ರಾಮ ಪಂಚಾಯತಿನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ 3ನೇ ವರ್ಷದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಜ. 21 ರಂದು ಪಂಚಾಯಿತಿ ಸಭಾ ಭವನದಲ್ಲಿ ನೆರವೇರಿತು.

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿನ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ವಹಿಸಿಕೊಂಡು ವಿಶೇಷ ಚೇತನ ಮಕ್ಕಳು ದೇವರ ಸಮಾನ ಅವರನ್ನು ದೇವರಾಗಿ ಕಾಣಿ ಹೊರತಾಗಿ ಹೊರೆಯಾಗಿ ಕಾಣಬೇಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ನೆರವೇರಿಸಿ ವಿಶೇಷ ಚೇತನರು ದೇವರ ಮಕ್ಕಳು ದೇವರ ಆಲಯಕ್ಕೆ ಇಂದು ನಾನು ಬಂದಿದ್ದೇನೆ .ವಿಶೇಷ ಚೇತನರು ಅಬಲರಲ್ಲ ಸಬಲರು ಅನುಕಂಪ ಹೊರತಾಗಿ ಅವಕಾಶ ನೀಡಬೇಕು ಎಂದು ಹೇಳಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ತಾಲೂಕು ವಿವಿದೋದ್ಧೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಷ್ಟಿಸ್ಟ್ ಡಿಸೋಜಾ ಮಾತನಾಡಿ ತಾಲೂಕಿನಲ್ಲಿ 48 ಗ್ರಾಮಗಳಲ್ಲಿ ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ನಡೆದ ಈ ಸಭೆಯು ತಾಲೂಕಿಗೆ ಮಾದರಿ ಇದು ಪಂಚಾಯತ್ ಆಡಳಿತ ಮಂಡಳಿ ಮತ್ತು ಊರ ದಾನಿಗಳ ಸಹಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಾಹ್ನವಿ ರವರನ್ನು ಸನ್ಮಾನಿಸಿ ವಸಂತ ಮರಕಡ ಪ್ರೋತ್ಸಾಹ ಧನ ನೀಡಿದರು. ಅಶೋಕ್ ನಾಯ್ಕ ಪಲ್ಲಿದಡ್ಕ ಹೇಮನಾಥ್ ನಾಯ್ಕ ಸುರುಳಿ ಇವರನ್ನು ಕೂಡ ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ವತಿಯಿಂದ 12 ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಧಾನಿಗಳಾದ ಜಯಣ್ಣ ಮಿನಂದೇನುಲು, ಶ್ರೀನಿವಾಸ್ ಗೌಡ ನೋಟರಿ ವಕೀಲರು ಶ್ರೀ ಸೌಧ ಬೆಳಾಲು, ಸುರೇಶ್ ದಾಸ್ ಗಾಂಧಿನಗರ ಮಾಯಾ, ಲಕ್ಷ್ಮಣ ಪೂಜಾರಿ ಪಳಸಾ ಮಾಯ, 57 ವಿಕಲಚೇತನರಿಗೆ ತಲಾ 5 ಕೆ. ಜಿ. ಅಕ್ಕಿಯನ್ನು ನೀಡಿದರು.

ಶಾಮಿಯಾನದ ಪ್ರಯೋಜಕ ಅರ್ಚನ್ ಸೌತೆ ಗದ್ದೆ, ಸೌಂಡ್ ಪ್ರಯೋಜಕ ಸಂತೋಷ್ ಕನಿಕಿಲ, ಊಟೋಪಚಾರದ ಪ್ರಾಯೋಜಕ ವಿಮಲಾ ನಾಯ್ಕ ಕಾರ್ಯದರ್ಶಿ ಕಾವಲಪಡೂರು ಸಹಕರಿಸಿದರು.

ವೇದಿಕೆಯಲ್ಲಿ ಬೆಳಾಲು ಗ್ರಾಮ ಪಂಚಾಯಿತಿನ ಸದಸ್ಯರುಗಳಾದ ದಿನೇಶ್ ಕೋಟ್ಯಾನ್, ಸತೀಶ್ ಎಳ್ಳುಗದ್ದೆ, ಪ್ರೇಮ, ಗಣ್ಯರಾದ ಓಬಕ್ಕ, ಯೋಗೀಶ್ ಗೌಡ ಸೌತೆ ಗದ್ದೆ, ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಎಂ. ಜೆ. ಜೋಸೆಫ್ ಇಂದಬೆಟ್ಟು, ಮಜೀದ್ ಮುಂಡಾಜಿ ಉಪಸ್ಥಿತರಿದ್ದರು.

ಸಿಬ್ಬಂದಿ ವರ್ಗ ಸಹಕರಿಸಿದರು. ನಾಡಗೀತೆಯನ್ನು ಪಂಚಾಯಿತಿ ಸಿಬ್ಬಂದಿ ಶಶಿಧರ ಓಡಿಪ್ರೊಟ್ಟು ಹಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಬೆಳಾಲು ಆರ್. ಡಬ್ಲ್ಯೂ. ವೀರಣ್ಣ ನಿರೂಪಿಸಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ದೆ ವಂದಿಸಿದರು.

LEAVE A REPLY

Please enter your comment!
Please enter your name here