Site icon Suddi Belthangady

ಕುಕ್ಕೇಡಿ: ಕರ್ನಾಟಕ ರಾಜ್ಯ ಪರವನ್ ಸಂಘದ ವಾರ್ಷಿಕ ಕ್ರೀಡಾಕೂಟ

ಕುಕ್ಕೇಡಿ: ಕರ್ನಾಟಕ ರಾಜ್ಯ ಪರವನ್ ಸಂಘ ಬೆಳ್ತಂಗಡಿ ತಾಲೂಕು ವತಿಯಿಂದ ಡಿ. 1 ರಂದು ಕುಕ್ಕೇಡಿ ಗೋಳಿಯಂಗಡಿ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಪರವನ್ ಸಂಘ ಮೂಡಬಿದ್ರೆ ಸದಸ್ಯ ಸುಕುಮಾರ್ ನಿಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉದಯ ಹಚ್ಚೆವುಪಲ್ಕೆ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಕಕ್ಕಿಂಜೆ, ದಾಮೋದರ್ ಮಾಡಾವು, ವಗ್ಗ ಎಸ್. ಸಿ. ಡಿ. ಸಿ. ಸಿ ಬ್ಯಾಂಕಿನ ಓಬಯ್ಯ ಕಜೆಕಾರ್, ಧರ್ಮಸ್ಥಳ ಗ್ರಾಮ ಪಂಚಾಯತ್ ಬಾಬು ಧರ್ಮಸ್ಥಳ, ಕಾರ್ಯದರ್ಶಿ ಹರೀಶ್ ಹೆಚ್. ರನ್ನಾಡಿ ಪಲ್ಕೆ, ಕೋಶಾಧಿಕಾರಿ ಶೇಖರ್ ಆರ್., ಉಪಾಧ್ಯಕ್ಷ ಹೆಚ್. ಪದ್ಮ, ಸುರೇಶ್ ಹಚ್ಚೆವು ಪಲ್ಕೆ, ಕೃಷ್ಣಪ್ಪ ರನ್ನಾಡಿ ಪಲ್ಕೆ, ಗಿರೀಶ್ ಹಚ್ಚೆವು ಪಲ್ಕೆ, ಆನಂದ ಪಣೆಜಾಲು, ಡಾಕಯ್ಯ ಪರವ ಗುಂಡೇರಿ ವೇಣೂರು, ನಾರಾಯಣ ಮಾಂಟ್ರಾಡಿ ಅಧ್ಯಕ್ಷರು ಮೂಡುಬಿದ್ರೆ, ಜಗನ್ನಾಥ ಕೋಣಾಜೆ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ, ಸಂಜೀವ ಪರವ ಕಾರ್ಕಳ, ಶೇಖರ ಪರವ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ರಾಜು ಮಾರ್ನಾಡು ಜೊತೆ ಕಾರ್ಯದರ್ಶಿ ಮೂಡಬಿದ್ರೆ ಉಪಸ್ಥಿತರಿದ್ದರು.

ಕಬಡ್ಡಿ, ಕ್ರೀಕೇಟ್, ತ್ರೋಬಾಲ್, ಹಗ್ಗ ಜಗ್ಗಾಟ ಮೊದಲಾದ ಕ್ರೀಡಾಕೂಟ ನಡೆಯಿತು. ನಿರ್ಮಿತಾ ಕಕ್ಕಿಂಜೆ ಸ್ವಾಗತಿಸಿದರು. ಉದ್ಘಾಟನ ಸಮಾರಂಭ ಪುಷ್ಪ ಕುಮಾರಿ ನಿರೂಪಿಸಿದರು, ಸಮಾರೋಪ ಸಮಾರಂಭ ರವೀಶ್ ಪಡುಮಲೆ ನಿರೂಪಿಸಿದರು. ಪುಷ್ಪ ಕುಮಾರಿ ವಂದಿಸಿದರು.

Exit mobile version