Site icon Suddi Belthangady

ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟ ಯುವತಿಯ ಕುಟುಂಬಸ್ಥರಿಗೆ ಮೆಸ್ಕಾಂ ಇಲಾಖೆಯ ಪರಿಹಾರದ ಚೆಕ್ ನ್ನು ಶಾಸಕ ಹರೀಶ್ ಪೂಂಜರಿಂದ ಹಸ್ತಾಂತರ

ಬೆಳ್ತಂಗಡಿ: ಶಿಬಾಜೆಯ ಬರ್ಗುಲಾದಲ್ಲಿ ಜು.25ರಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ ಮೆಸ್ಕಾಂ ಇಲಾಖೆಯ ಪರಿಹಾರವಾಗಿ ರೂ.5 ಲಕ್ಷದ ಚೆಕ್‌ ನ್ನು ಶಾಸಕ ಹರೀಶ್ ಪೂಂಜರವರ ಮುಖಾಂತರ ಕುಟುಂಬಸ್ಥರಿಗೆ ಶ್ರಮಿಕ ಕಾರ್ಯಾಲಯದಲ್ಲಿ ಜು.1ರಂದು ವಿತರಿಸಿದರು.

ಈ ವೇಳೆ ಶಾಸಕ ಹರೀಶ್ ಪೂಂಜ ಮಾತನಾಡಿ ಮೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ಯುವತಿ ಸಾವನ್ನಪ್ಪಿದ್ದರಿಂದ ಇಲಾಖೆಯಿಂದ 5 ಲಕ್ಷ ಪರಿಹಾರವನ್ನು ನೀಡಲಾಯಿತು.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪರಿಹಾರ ದೊರಕಿಸುವಂತೆ ಇಲಾಖೆಗಳಿಗೆ ಹಾಗೂ ಸಚಿವರಿಗೆ ಮನವಿಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಉಪ ವಿಭಾಗದ ಸ.ಕಾ. ಇಂಜಿನಿಯರ್ ಕ್ಲೀಮೆಂಟ್ ಬೆಂಜಮಿನ್ ಬ್ರಾಗ್ಸ್, ಶಿಬಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನಕರ ಕುರುಪ್ ಬರ್ಗುಳ, ಶಿಬಾಜೆ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ರತೀಶ್ ಗೌಡ ಹಾಗೂ ಮೃತ ಯುವತಿಯ ಕುಟುಂಬಸ್ಥರು ಉಪಸ್ಥಿತರಿದ್ದರು.

Exit mobile version