ಬೆಳ್ತಂಗಡಿ: ಕ.ರಾ.ರ.ಸಾ.ಸಂಸ್ಥೆ, ಬೆಳ್ತಂಗಡಿ ಬಸ್ಸು ನಿಲ್ದಾಣ ನಿರ್ಮಾಣಕ್ಕಾಗಿ ಮಂಜೂರಾದ ನಿವೇಶನದಲ್ಲಿದ್ದ ಕಂದಾಯ ಇಲಾಖೆ ಬೆಳ್ತಂಗಡಿಯ ಹಳೆಯ ತಾಲೂಕು ಕಛೇರಿ ಕಟ್ಟಡದ ತೆರವಿನ ಸಂದರ್ಭದಲ್ಲಿ ಲಭ್ಯವಾದಂತಹ ಮರು ಉಪಯೋಗ/ಪುನರ್ ಬಳಕೆ ಸಾಧ್ಯವಾಗುವ ಸಾಮಾಗ್ರಿಗಳಾದ ಕಟ್ಟಡ ಕಲ್ಲು, ಕಿಟಕಿ ಬಾಗಿಲು (ಕಬ್ಬಿಣ/ಮರ) ಛಾವಣಿ ನಿರ್ಮಾಣದ ಮರ/ಕಬ್ಬಿಣ (ಏಂಗಲ್ಸ್), ಹೆಂಚು, ಫಲಕಗಳು(ಸಿಮೆಂಟ್/ಕಬ್ಬಿಣ) ಇತ್ಯಾದಿ ಸಾಮಾಗ್ರಿಗಳನ್ನು ಕಟ್ಟಡದಿಂದ ಬಿಡಿಸಿ ನಿವೇಶನದಲ್ಲಿ ಹಾಗೂ ಕಂದಾಯ ಇಲಾಖೆಯ ನೂತನ ಆಡಳಿತ ಕಟ್ಟಡ (ಮಿನಿ ವಿದಾನ ಸೌಧ)ದ ಮುಂಭಾಗದಲ್ಲಿ ಗುಡ್ಡೆ ರೂಪದಲ್ಲಿ ಶೇಖರಣೆ ಮಾಡಲಾಗಿದೆ.ಸದರಿ ಸಾಮಾಗ್ರಿಗಳನ್ನು ಹರಾಜು ಮೂಲಕ ವಿಲೇವಾರಿ ಮಾಡುವುದಕ್ಕಾಗಿ ಹರಾಜು ಪ್ರಕ್ರಿಯೆಯನ್ನು ಸ್ಥಳದಲ್ಲಿಯೇ ಯಥಾಸ್ಥಿತಿಯಲ್ಲಿ ದಿನಾಂಕ: 21/12/2023 ರಂದು ಪೂರ್ವಾಹ್ನ 11.00 ಗಂಟೆಗೆ ನಡೆಸಲಾಗುವುದು.
ಹರಾಜಿನ ನಿಯಮಗಳು:
- ಆಸಕ್ತಿಯುಳ್ಳ ಬಿಡ್ಡುಗಾರರು ಮುಂಗಡ ಹಣಿ ರೂ. 10000/- ನ್ನು ಸ್ಥಳದಲ್ಲಿಯೇ ಪಾವತಿಸಿ ಹರಾಜಿನಲ್ಲಿ ಭಾಗವಹಿಸುವುದು.
- ಗರಿಷ್ಟ ಮೊತ್ತದ ಬಿಡ್ಡುಗಾರರು ಸ್ಥಳದಲ್ಲಿಯೇ ಬಿಡ್ಡಿನ ಮೊತ್ತ ಹಾಗೂ ಬಿಡ್ಡಿನ ಮೊತ್ತದ ಶೇ.18 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಮತ್ತು ಶೇ.1 ರಷ್ಟು ಆದಾಯ ತೆರಿಗೆಯನ್ನು ಸ್ಥಳದಲ್ಲಿಯೇ ಪಾವತಿಸತಕ್ಕದ್ದು, ತಪ್ಪಿದಲ್ಲಿ ಮುಂಗಡ ಹಣ 10000/- ನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
- ವಿಜೇತ ಬಿಡ್ಡುಗಾರರು ಸಾಮಾಗ್ರಿ ತೆರವಿನ ಸಂದರ್ಭದಲ್ಲಿ ಯಾವುದೇ ಸಂಸ್ಥೆಯ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿ ಮಾಡಬಾರದು. ಹಾನಿಯಾದರೆ ಬಿಡ್ಡುದಾರರೇ ಜವಾಬ್ದಾರರು.
- ಮೇಲ್ಕಂಡ ಸಾಮಾಗ್ರಿಗಳನ್ನು ತೆಗೆಯುವಾಗ/ಸಾಗಿಸುವಾಗ ಕೆಲಸಗಾರರಿಗೆ ಯಾವುದೇ ಅನಾಹುತವಾದರೇ ಸಂಸ್ಥೆಯು ಜವಾಬ್ದಾರಿಯಲ್ಲ, ಬಿಡ್ಡುದಾರರೇ ಜವಾಬ್ದಾರರು.
- ವಿಜೇತ ಬಿಡ್ಡುದಾರರು ನಿಗಮದ/ಸಾರ್ವಜನಿಕ ಆಸ್ತಿ ಅಥವಾ ಯಾವುದೇ ಸ್ವತ್ತುಗಳಿಗೆ ಹಾನಿಯಾಗದಂತೆ ಸಾಗಿಸುವುದು. ಹಾಗೂ ಮೇಲ್ಕಂಡ ಸಾಮಾಗ್ರಿಗಳನ್ನು ಸಾಗಿಸಿದ ನಂತರದಲ್ಲಿ ಉಳಿಯುವ ಎಲ್ಲಾ ಸಾಮಾಗ್ರಿಗಳ ತುಂಡು/ಚೂರು ಇತ್ಯಾದಿಗಳನ್ನು ಬಿಡ್ಡುದಾರರೇ ಹೊರ ಸಾಗಿಸತಕ್ಕದ್ದು. ನಂತರದಲ್ಲಿ ಮುಂಗಡ ಹಣ ರೂ.10000/-ನ್ನು ಹಿಂದಿರುಗಿಸಲಾಗುವುದು.
- ಯಾವುದೇ ಕಾರಣ ನೀಡದೇ ಹರಾಜನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ನಿಗಮದ ಸೂಕ್ತಾಧಿಕಾರಿಗಳು ಹೊಂದಿರುತ್ತಾರೆ.
- ವಿಜೇತ ಬಿಡ್ಡುದಾರರಿಗೆ ಸಾಮಾಗ್ರಿ ಸಾಗಿಸುವ ಕುರಿತಂತೆ ಸಂಸ್ಥೆಯಿಂದ ಅನುಮತಿ ನೀಡಿದ 10 ದಿನಗಳ ಒಳಗಾಗಿ ಸಾಮಾಗ್ರಿಗಳನ್ನು ಹೊರಸಾಗಿಸಬೇಕಿದ್ದು ವಿಳಂಭವಾದಲ್ಲಿ ಪ್ರತಿ ದಿನಕ್ಕೆ ರೂ 100 /- ನೆಲಬಾಡಿಗೆ ವಿಧಿಸಲಾಗುವುದು.
- ಈ ಕುರಿತಂತೆ ಮಾಹಿತಿ ವಿವರಗಳಿಗಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕ.ರಾ.ರ.ಸಾ ನಿಗಮ ಪುತ್ತೂರು ವಿಭಾಗ ದೂ. ಸಂಖ್ಯೆ 7760990984 ಗೆ ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.