ಬೆಳ್ತಂಗಡಿ: ಬೆಳ್ತಂಗಡಿ ಕೃಷಿ ಇಲಾಖೆಯ ತಾಲೂಕಿನ ಜಲಾನಯನ ವಿಭಾಗದಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಇತರೆ ಉಪಚಾರಗಳು (PMKSY-OI) ಯೋಜನೆಯಡಿ ಶೇ.50 ರ ರಿಯಾಯಿತಿಯಲ್ಲಿ ಗರಿಷ್ಠ ರೂ.10,000 ಮಿತಿಗೊಳಪಟ್ಟು ಪಿ.ವಿ.ಸಿ ಪೈಪ್ ಗಳನ್ನು ಇಲಾಖೆಯ ಮೂಲಕ ಪಡೆಯಲು ರೈತರು ತಮ್ಮ ಜಮೀನಿನ RTC, ಆಧಾರ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೊ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ (SC-ST) ರೈತರ ಜಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ಹೋಬಳಿಗಳಾದ ಬೆಳ್ತಂಗಡಿ, ಕೊಕ್ಕಡ, ವೇಣೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡಲೇ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ, ಅದೇ ರೀತಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ. 50 ರಷ್ಟು ಸಹಾಯಧನ ಗರಿಷ್ಟ ರೂ. 63,000/- ಮಿತಿಗೊಳಪಟ್ಟು ಸಹಾಯಧನ ಪಡೆಯಲು ಸಾಮಾನ್ಯ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರು ಮೇಲ್ಕಾಣಿಸಿದ ದಾಖಲೆಯೊಂದಿಗೆ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡಲೇ ಅರ್ಜಿಯನ್ನು ಸಲ್ಲಿಸುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.