Site icon Suddi Belthangady

ಬೆಳ್ತಂಗಡಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರ ವ್ಯಾಪ್ತಿಯ ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಳ್ತಂಗಡಿ ನಗರ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಸಂತ ತೆರೇಸಾ ಪ್ರೌಢ ಶಾಲೆ ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದು ವಾಣಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಪ್ರೌಢ ವಿಭಾಗದಿಂದ ಭಾಷಣ ನವಮಿ – ಪ್ರಥಮ, ದೇಶ ಭಕ್ತಿ ಗೀತೆ ಮಾನ್ಯ – ತೃತೀಯ, ಹಿರಿಯ ಪ್ರಾಥಮಿಕ ವಿಭಾಗ ಭಾಷಣ ಪ್ರಾಪ್ತಿ-ಪ್ರಥಮ, ದೇಶ ಭಕ್ತಿ ಗೀತೆ ಮನೀಷಾ – ಪ್ರಥಮ, ಪ್ರಬಂಧ ಅದ್ವಿತ – ತೃತೀಯ, ಕಿರಿಯ ಪ್ರಾಥಮಿಕ ವಿಭಾಗ, ದೇಶ ಭಕ್ತಿ ಗೀತೆ ಶಾರ್ವಿ – ಪ್ರಥಮ, ಚಿತ್ರಕಲೆ ಆದ್ಯ – ದ್ವಿತೀಯ ಸ್ಥಾನ ಪಡೆದಿರುತ್ತಾರೆ.

Exit mobile version