Site icon Suddi Belthangady

ಕಳಿಯ: ಬೊಳ್ಳುಕಲ್ಲು ಭಜನಾ ಮಂಡಳಿ ವತಿಯಿಂದ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ

ಕಳಿಯ: ಬೊಳ್ಳುಕಲ್ಲು ಪರಿಸರದ ಸುಂದರಿ ಮತ್ತು ಅವರ ಮಗ ವಾಸವಿರುವ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಈ ಜಡಿ ಮಳೆಗೂ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದನ್ನು ಅರಿತು ಮಾನವೀಯ ದೃಷ್ಟಿಯಿಂದ ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ನಗರ ಬೊಳ್ಳುಕಲ್ಲು ಭಜನಾ ಮಂಡಳಿಯ ನೇತೃತ್ವದಲ್ಲಿ ಇವರ ಮನೆಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಕಲ್ಕೂರ್ಣಿ, ಉಪಾಧ್ಯಕ್ಷ ಯಶೋಧರ ಗೌಡ ಹಿರ್ಯ, ಜೊತೆ ಕಾರ್ಯದರ್ಶಿ ರಕ್ಷಿತ್ ಬಾಕಿಮಾರ್, ಕೋಶಾಧಿಕಾರಿ ದೀಕ್ಷಿತ್ ಹಿರ್ಯಾ, ಸಂಚಾಲಕರಾದ ಸುರೇಶ್ ಕಲ್ಕುರ್ಣಿ, ಮೋಹನ್ ಬೇರ್ಕೆತೊಡಿ, ಕುಶಾಲಪ್ಪ ಪೆರಾಜೆ, ಸದಸ್ಯರಾದ ಪದ್ಮನಾಭ ಕಲ್ಕುರ್ಣಿ ಉಪಸ್ಥಿತರಿದ್ದರು.

Exit mobile version