Site icon Suddi Belthangady

ಆಟೋ ಚಾಲಕರ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಂತೆ, ಬಿಎಂಎಸ್ ವೆಹಿಕಲ್ ಯೂನಿಯನ್ ಸಂಘದಿಂದ ರಾಮಲಿಂಗ ರೆಡ್ಡಿಯವರಿಗೆ ಮನವಿ

ಆಟೋ ಚಾಲಕರ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಂತೆ ಕರ್ನಾಟಕ ಸರಕಾರದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರನ್ನು ಬಿಎಂಎಸ್ ನ ವೆಹಿಕಲ್ ಯೂನಿಯನ್ ಸಂಘಗಳಿಂದ ಇಂದು ಬೆಂಗಳೂರು ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲಿ ಭೇಟಿ ಮಾಡಲಾಯಿತು ಈ ಸಂದರ್ಭದಲ್ಲಿ ಈ ಕೆಳಗಿನ ವಿಷಯಗಳಂತೆ ಚಾಲಕನ ಭವಿಷ್ಯಕ್ಕೆ ಪೂರಕವಾಗುವ ಭದ್ರತಾ ಯೋಜನೆಗಳನ್ನು ರೂಪಿಸುವಂತೆ ಕೋರಿ ಕೊಳ್ಳಲಾಯಿತು.

ಕರ್ನಾಟಕ ರಾಜ್ಯದಲ್ಲಿ ಖಾಸಗಿ ಸಾರಿಗೆ ಚಾಲಕರ ಸಮಸ್ಯೆ ಮತ್ತು ಕ್ಷೇಮಾಭಿವೃದ್ಧಿಗೆ ಯಾವುದೇ ಪಕ್ಷದ ರಾಜ್ಯ ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ. ಖಾಸಗಿ ಫೈನಾನ್ಸ್‌ಗಳ ಕಿರುಕುಳದಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಪಕ್ಷದ ರಾಜ್ಯ ಸರ್ಕಾರ ಖಾಸಗಿ ಸಾರಿಗೆ ಚಾಲಕರನ್ನು ಕೀಳಾಗಿ ಕಾಣುತ್ತಿದೆ ಎಂದು ನಮಗೆ ಅನಿಸುತ್ತಿದೆ.

ಈ ಸರಣಿಯಲ್ಲಿ ಆಟೋ ಮತ್ತು ಖಾಸಗಿ ಸಾರಿಗೆ ಚಾಲಕರ ಸಮಸ್ಯೆಗಳ ಪರಿಹಾರಕ್ಕೆ ಬಿಪಿಟಿಎಂಎಂ ಆಂದೋಲನಕ್ಕೆ ಸಿದ್ಧತೆ ನಡೆಸಲಾಗಿದೆ. ಇದರ ಅಡಿಯಲ್ಲಿ, ನಾವು ನಮ್ಮ ಸಮಸ್ಯೆಯ ಬಗ್ಗೆ ತಿಳಿಸುವ ಜ್ಞಾಪಕ ಪತ್ರವನ್ನು ನೀಡುತ್ತಿದ್ದೇವೆ. ಆದ್ದರಿಂದ, ನೀವು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಉಪಕ್ರಮವನ್ನು ತೆಗೆದುಕೊಳ್ಳಲು ಮತ್ತು ಖಾಸಗಿ ಸಾರಿಗೆ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಿ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಕೆಳಗಿನಂತೆ ‌ಬೇಡಿಕೆ ಸಲ್ಲಿಸುತ್ತಿದ್ದೇವೆ

ಬೇಡಿಕೆಗಳು

*ವಾಹನದ ಇನ್ಸೂರೆನ್ಸ್ ಕ್ಲೇಮ್ ನ ಸಂದರ್ಭದಲ್ಲಿ ಬ್ಯಾಡ್ಜ್ ಕಡ್ಡಾಯ ಮಾಡುವುದನ್ನು ಇತರ ರಾಜ್ಯಗಳಂತೆ ಕೈ ಬಿಡಬೇಕು

*ಆಟೋ ಚಾಲಕರ ಮಕ್ಕಳಿಗೆ ಈ ಹಿಂದಿನ ಸರಕಾರ ನೀಡಿರುವ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಬೇಕು

*ಆರ್ ಟಿ ಓ ಕಚೇರಿಗಳಲ್ಲಿ ಬ್ರೋಕರ್ ವ್ಯವಸ್ಥೆ ನಿಲ್ಲಿಸಬೇಕು

*ಆಟೋ ಮತ್ತು ಟೂರಿಸ್ಟ್ ವಾಹನಗಳಿಗೆ ಸೂಕ್ತ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಬೇಕು

*ಹೆದ್ದಾರಿಯಲ್ಲಿ ಲಾರಿ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ,ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ,ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕೊಡ್ಗಿ,ಕಾಪು ವಿಧಾನಸಭಾ ಕ್ಷೇತ್ರದ ಸುರೇಶ್ ಶೆಟ್ಟಿ ಗುರ್ಮೆ ಸಾಥ್ ನೀಡಿದರು.ಈ ಸಂಧರ್ಭದಲ್ಲಿ‌ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ,ಬಿಪಿಟಿಎಂಎಂ ನ ರಾಷ್ಟ್ರೀಯ ಸದಸ್ಯರಾದ ಸುರೇಶ್ ಕುಂದಾಪುರ,ಬಿಎಂಎಸ್ ದ.ಕ ಜಿಲ್ಲಾ ಜತೆ ಕಾರ್ಯದರ್ಶಿ ಸಾಂತಪ್ಪ ಕಲ್ಮಂಜ ,ಕುಂದಾಪುರ ಅಟೋ ರಿಕ್ಷಾ ಮಜ್ದೂರ್ ಸಂಘದ ಅಧ್ಯಕ್ಷರಾದ ಸುರೇಶ್ ಪುತ್ರನ್ ‘ ಬೆಳ್ತಂಗಡಿ ತಾಲೂಕು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಕ್ರಷ್ಣ ಬೆಳಾಲು,ಪ್ರಧಾನ ಕಾರ್ಯದರ್ಶಿ ರಮೇಶ್ ‌.ಕೆ ,ಪ್ರಶಾಂತ ಗರ್ಡಾಡಿ ಬಂಟ್ವಾಳ ಅಟೋ ರಿಕ್ಷಾ ಚಾಲಕ ಸಂಘದ ಫ್ರಧಾನ ಕಾರ್ಯದರ್ಶಿ ಕ್ರಷ್ಣ ಕುಮಾರ್ ಹಾಗೂ ವೇಣೂರು ವಲಯದ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ವಸಂತ ‌ಮಡಿವಾಳ ರಮೇಶ್ ಉಜಿರೆ, ಇತರ
‌ಬಿಎಂಎಸ್ ವೆಹಿಕಲ್ ಯೂನಿಯನ್ ಪ್ರಮುಖರು ಉಪಸ್ಥಿತರಿದ್ದರು

Exit mobile version