Site icon Suddi Belthangady

ಗೇರುಕಟ್ಟೆ ನಮ್ಮೂರ ಸರಕಾರಿ ಪ್ರೌಢಶಾಲೆಯಲ್ಲಿ ಕೊಠಡಿಗಳ ಕೊರತೆ

ಗೇರುಕಟ್ಟೆ: ಗೇರುಕಟ್ಟೆಯ ನಮ್ಮೂರ ಸರಕಾರಿ ಪ್ರೌಢಶಾಲೆಯು 1989-90ನೇ ಸಾಲಿನಲ್ಲಿ ಆರಂಭಗೊಂಡಿದ್ದು, 450 ರಿಂದ 500 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ, ಮಾಡುತ್ತಿದ್ದಾರೆ.

ವರ್ಷಗಳು ಉರುಳಿದಂತೆ ವಿವಿಧ ಇಲಾಖೆಗಳ ವತಿಯಿಂದ ಹೊಸ ಆರ್‌ಸಿಸಿ ಕಟ್ಟಡಗಳು ನಿರ್ಮಾಣವಾಗಿವೆ.

ಪ್ರಸ್ತುತ ಈ ಶಾಲೆಯಲ್ಲಿ 180 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, 9 ಮತ್ತು 10ನೇ ತರಗತಿಯಲ್ಲಿ 2ವಿಭಾಗಗಳ ಅಗತ್ಯತೆ ಇದೆ. ಒಟ್ಟು 5 ವಿಭಾಗಗಳಲ್ಲಿ ತರಗತಿ ನಡೆಸಬೇಕಾಗಿದೆ. ಆದರೆ ಹಳೆಯ ಹಂಚಿನ ಮಾಡಿನ ಕಟ್ಟಡ ಹಾಗೂ ಆರ್‌ಸಿಸಿ ಕಟ್ಟಡ ಹೊಂದಿದ 2ಕೊಠಡಿಗಳು ನಾದುರಸ್ತಿಯಲ್ಲಿದ್ದು ತರಗತಿ ನಡೆಸಲು ಅಸಾಧ್ಯವಾಗಿದೆ.

2023-24 ನೇ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ಯೋಜನೆಯಡಿಯಲ್ಲಿ ಆಟೋಮೊಬೈಲ್ ಕೋರ್ಸ್ ಆರಂಭಗೊಳ್ಳಲಿದ್ದು ಇನ್ನೆರಡು ಕೊಠಡಿಗಳ ಅನಿವಾರ್ಯತೆ ಇದೆ.ಎಲ್ಲಾ ವಿಷಯಗಳ ಶಿಕ್ಷಕರು ಲಭ್ಯವಿದ್ದು, ಕೊಠಡಿಗಳ ಕೊರತೆ ವಿದ್ಯಾರ್ಥಿಗಳ ಪಾಠಪ್ರವಚನಗಳಿಗೆ, ಶೈಕ್ಷಣಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಸಂಬಂಧಪಟ್ಟವರು ಇದರ ಕಡೆ ಗಮನಹರಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕರಿಸಬೇಕಾಗಿದೆ.

Exit mobile version