ಧರ್ಮಸ್ಥಳ: ಇಲ್ಲಿನ ಮುಂಡ್ರುಪಾಡಿ ನೇರ್ತನೆಯ ಕಾಡಿನಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಇಂದು ಕಾಡಿನಾದ್ಯಂತ ವ್ಯಾಪಿಸುತ್ತಿದೆ.
ಬಿಸಿಲ ಬೇಗೆಗೆ ಬೆಂಕಿ ವ್ಯಾಪಿಸುತ್ತಿದ್ದು ಸ್ಥಳೀಯರು,ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಆದರೆ ಇಲ್ಲಿಯ ತನಕವೂ ಬೆಂಕಿ ಆರದೇ ಇರುವುದು ಆತಂಕ ಮೂಡಿಸಿದೆ.