ಎಸ್ ಜೆ ಎಂ ಸುಳ್ಯ ರೇಂಜ್ ಮಟ್ಟದ ಮದ್ರಸಾ ವಿದ್ಯಾರ್ಥಿಗಳ ಪ್ರತಿಭಾ ಸಂಗಮ 2022

0

 

ಸುನ್ನಿ ಜಂಇಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಮಟ್ಟದ ಮದ್ರಸಾ ವಿದ್ಯಾರ್ಥಿಗಳ ಪ್ರತಿಭಾ ಸಂಗಮ 2022 ಇಂದು ಪೈಚಾರು ಖುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಈ ಪ್ರತಿಭಾ ಸಂಗಮದಲ್ಲಿ ಸುಳ್ಯ ತಾಲೂಕಿನ ಸುಮಾರು 26 ಮದರಸಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೇದಿಕೇತರ ವಿವಿಧ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ತಾಹಿರ್ ತಂಗಳ್ ಸುಳ್ಯ ಪ್ರಾರ್ಥನೆ ನೆರವೇರಿಸಿದರು.

ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಮಹಮ್ಮದ್ ಸಕಾಫಿ ಮೊಗರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಪೈಚಾರು ಜುಮಾ ಮಸೀದಿ ಕತೀಬರಾದ ಮುನೀರ್ ಸಕಾಫಿ, ಮಸೀದಿ ಸಮಿತಿ ಅಧ್ಯಕ್ಷ ಶರೀಫ್ ಟಿ ಎ, ಎಸ್ ಜೆ ಎಂ ರಾಜ್ಯ ಸಮಿತಿ ಕಾರ್ಯದರ್ಶಿ ಇಬ್ರಾಹಿಂ ಸಕಾಫಿ ಪುಂಡೂರು, ಎಸ್ಎಂಎ ಸುಳ್ಯ ರೇಂಜ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಜಾಲಸೂರು ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್, ಪೈಜಾರು ಮದರಸ ಸದರ್ ಮುಅಲ್ಲಿಮ್ ಮುಹಿಯದ್ದೀನ್ ಲತೀಫಿ,ಮುಅಲ್ಲಿಮ್ ಅನಿಫ್ ಮದನಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯದರ್ಶಿ ನಿಝರ್ ಸಕಾಫಿ
ಸ್ವಾಗತಿಸಿ ವಂದಿಸಿದರು.
ಪೈಚಾರ್ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಹನೀಫ್ ಪಿಕೆ, ಕೋಶಾಧಿಕಾರಿ ಅಬ್ದುಲ್ ಕರೀಂ, ಮದರಸ ಉಸ್ತುವಾರಿಗಳಾದ ಮುಜೀಬ್ ಪೈಚಾರ್, ರಜ್ಜಾಕ್ ಹಾಗೂ ಸಮಿತಿ ಸದಸ್ಯರು, ಸ್ಥಳೀಯ ಯುವಕರು, ಎಸ್ ಜೆ ಎಂ ರೇಂಜ್ ಸಮಿತಿ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕರಿಸಿದರು.

 

 

LEAVE A REPLY

Please enter your comment!
Please enter your name here