ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಪೀಸ್ ಪೋಸ್ಟರ್ ಸ್ಪರ್ಧೆ

0

 

“ಸಹಾನುಭೂತಿಯಿಂದ ಮುನ್ನಡೆ” ಎಂಬ ವಿಷಯದೊಂದಿಗೆ ಸುಳ್ಯ ಲಯನ್ಸ್ ಕ್ಲಬ್ ವಿಶ್ವ ಶಾಂತಿಯ ಬಗ್ಗೆ ಮಕ್ಕಳ ದ್ರಷ್ಟಿಕೋನವನ್ನು ಹೊರಹಾಕಲು ಲಯನ್ಸ್ ಇಂಟರ್ ನ್ಯಾಷನಲ್ ಪೀಸ್ ಪೋಸ್ಟರ್ ಸ್ಪರ್ಧೆಯನ್ನು ಕೆವಿಜಿ ಐ ಪಿ ಎಸ್ ನಲ್ಲಿ ಲಯನ್ ರಂಗನಾಥ್ ಪಿ. ಎಂ. ಸಂಯೋಜಿಸಿದರು ಹಾಗು ಮಕ್ಕಳನ್ನು ಈ ಸ್ಪರ್ಧೆಗೆ ಸ್ವಾಗತಿಸಿದರು. ಕಲಾ ಶಿಕ್ಷಕರಾದ ಸುಜಿತ್ ಕೆ. ಮತ್ತು ಮೆಲ್ವಿನ್ ಪಾಯಸ್ ಅವರ ನೇತ್ರತ್ವದಲ್ಲಿ ಈ ಸ್ಪರ್ಧೆಯನ್ನು ನೆಡೆಸಲಾಯಿತು.

ಶಾಲಾ ಸಂಚಾಲಕರು ಡಾ. ರೇಣುಕಾ ಪ್ರಸಾದ್ ಕೆ. ವಿ., ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ., ಪ್ರಾಂಶುಪಾಲ ಅರುಣ್ ಕುಮಾರ್ ಎಸ್. ಸುಳ್ಯ ಲಯನ್ಸ್ ನವರು ವಿಶ್ವ ಶಾಂತಿಯನ್ನು ಪ್ರೇರೇಪಿಸುವ ಈ ಸ್ಪರ್ಧೆಯನ್ನು ಪ್ರಾಯೋಜಿಸಿದನ್ನು ಮೆಚ್ಚಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸ್ಪರ್ಧೆಯ ನಂತರ ಲಯನ್ ಕ್ಲಬ್ ನ ಅಧ್ಯಕ್ಷೆ ಲಯನ್.ರೂಪ ಜೆ. ರೈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆಲ್ಲ ಪ್ರಮಾಣ ಪತ್ರವನ್ನು ನೀಡಿ ಧನ್ಯವಾದಗಳನ್ನು ಹೇಳಿದರು.

LEAVE A REPLY

Please enter your comment!
Please enter your name here