ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಪ್ರಯುಕ್ತ ಶ್ರಮದಾನ

0

 

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಒಂದು ತಿಂಗಳ ಕಾಲ ಅ.26 ರಿಂದ ನ.23 ರ ತನಕ ಕಾರ್ತೀಕ ದೀಪೋತ್ಸವ ನಡೆಯಲಿದೆ. ಸಂಜೆ ಗಂಟೆ 6 ರಿಂದ 7.30 ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದ್ದು ಈ ಭಜನಾ ಕಾಯಕ್ರಮದಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಈ ವರ್ಷ ಗ್ರಹಣದ ನಿಮಿತ್ತಾ ಅ.25 ರಂದು ನಡೆಯಲಿರುವ ಭಜನಾ ಕಾರ್ಯಕ್ರಮವು ಅ.26 ರಂದು ನಡೆಯಲಿದ್ದು, ಅ.25 ರಂದು ಬಲೀಂದ್ರ ಪೂಜೆಗೆ ಮರ ಹಾಕುವ ಕಾರ್ಯಕ್ರಮ ನಡೆಯಲಿದೆ. ಇದರ ಪ್ರಯುಕ್ತ ಅ.23 ರಂದು ಮಹಾವಿಷ್ಣು ಸೇವಾ ಸಮಿತಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ತೀಕ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೆ ದೀಪಾರಾಧನೆ ಮಾಡುವ ವ್ಯವಸ್ಥೆ ಇದೆ.

 

LEAVE A REPLY

Please enter your comment!
Please enter your name here