ವಿದ್ಯಾ ಭಾರತಿಯ ರಾಷ್ಟ್ರೀಯ ಕಬ್ಬಡಿಯಲ್ಲಿ ಜ್ಞಾನದೀಪ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನೊಳಗೊಂಡ ತಂಡ ವಿನ್ನರ್ಸ್

0

 

ಜ್ಞಾನದೀಪ ಎಲಿಮಲೆ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅಖಿಲ ಭಾರತ ವಿದ್ಯಾ ಭಾರತಿ ಶಿಕ್ಷಾ ಸಂಸ್ಥಾನದ ಜಿಲ್ಲೆ, ರಾಜ್ಯ ಹಾಗೂ ದಕ್ಷಿಣ ಮಧ್ಯ ಕ್ಷೇತ್ರದ ಕಬ್ಬಡ್ಡಿ ಪಂದ್ಯಾಟಗಳಲ್ಲಿ ಜಯಗಳಿಸಿ ಒಂಬತ್ತು ಹಾಗೂ ವಿವೇಕಾನಂದ ವಿದ್ಯಾ ಸಂಸ್ಥೆಯ ಮೂರು ವಿದ್ಯಾರ್ಥಿಗಳನ್ನು ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ತಂಡ ಅ.10 ಮತ್ತು 11ರಂದು ಉತ್ತರ ಪ್ರದೇಶದ ಕುರ್ಜಾದಲ್ಲಿ ನಡೆದ ಅಖಿಲ ಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬಿಹಾರ, ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಹಾಗೂ ರಾಜ್ಯಗಳನ್ನು ಮಣಿಸಿ ಫೈನಲ್ ಪ್ರವೇಶಿಸಿ ಫೈನಲ್ ನಲ್ಲಿ ಬಲಿಷ್ಠ ಉತ್ತರಪ್ರದೇಶ ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಸ್ಕೂಲ್ ಗೇಮ್ಸ್ ಆಫ್ ಫೆಡರೇಷನ್ ಇಂಡಿಯಾದ ರಾಷ್ಟ್ರೀಯ ಕಬ್ಬಡಿ ಪಂದ್ಯಾಟಕ್ಕೆ ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ. ಈ ಹಿಂದೆ ಆರು ಬಾರಿ ರಾಷ್ಟ್ರೀಯ ಕಬಡ್ಡಿಯಲ್ಲಿ ಭಾಗವಹಿಸಿದ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯ ತಂಡ ಇದೀಗ 7ನೇ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದೆ.

 

ತಂಡದಲ್ಲಿ, ಕೃತಿಕಾ.ಜಿ ಬಾಳುಗೋಡು, ಪೂಜಾಶ್ರೀ ದೋಳ,,ಮೇಘಶ್ರೀ ನಡುಬೆಟ್ಟು, ಪ್ರನ್ವಿಕ. ಬಿ. ರೈ. ಕರ್ನೂರು,ತೃಶಾ. ಕಬಕ, ಕೃತಿಕಾ.ಜಿ. ಕರ್ನೂರು , ನಿಭಾ. ಪಿ. ಎನ್ . ರಚಿತಾ ಬಳ್ಕಾಡಿ , ನಿಹಾರಿಕಾ ಹಾಸನಡ್ಕ,ಪ್ರಣಮ್ಯ ಕಡಪಳ , ನಿತಾ. ಪಿ.ಎನ್ ಇವರು ಭಾಗವಹಿಸಿದರು.

LEAVE A REPLY

Please enter your comment!
Please enter your name here