ಅರಂತೋಡು : ಈದ್ ಮೀಲಾದ್ ಸಮಾರೋಪ, ಮಕ್ಕಳ ಕಲಾ ಸಾಹಿತ್ಯ ಮೇಳ, ಬಹುಮಾನ ವಿತರಣೆ, ಮೌಲೀದ್ ಪಾರಾಯಣದೊಂದಿಗೆ ಸಂಪನ್ನ

0

 

ಬದ್ರಿಯಾ ಜುಮಾ ಮಸ್ಜಿದ್, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಶನ್ ಹಾಗೂ ನುಸ್ರತ್ ಇಸ್ಲಾಂ ಮದರಸ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಈದ್ ಮೀಲಾದನ್ನು ಅರಂತೋಡಿನಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ ಮೌಲೀದ್ ಪಾರಾಯಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಂದ ವಿವಿದ ಕಲಾಸ್ಪರ್ಧೆಗಳು ದಫ್ ಪ್ರದರ್ಶನ ಹಾಗೂ ಬುರ್ದಾ ಮಜಲಿಸ್ ಕಾರ್ಯಕ್ರಮಗಳು ಮರ್‌ಹೂಮ್ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ವೇಧಿಕೆಯಲ್ಲಿ ಅದ್ಧುರಿಯಾಗಿ ನಡೆಯಿತು. ನಂತರ ಸಮಾರೋಪ ಸಮಾರಂಭವು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯನ್ನು ನಡೆಯಿತು. ಸಮಾರೋಪ ಭಾಷಣವನ್ನು ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ಮಾತನಾಡಿ ಪ್ರವಾದಿಯವರ ಆದರ್ಶ ಮತ್ತು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರು ಮುನ್ನಡೆಯಬೇಕೆಂದರು. ಬಹುಮಾನವನ್ನು ತೆಕ್ಕಿಲ್ ಗ್ರಾಮಾಭಿವ್ರದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ನ ಗೌರವಾಧ್ಯಕ್ಷರಾದ ಟಿ.ಎಂ ಶಾಹೀದ್ ತೆಕ್ಕಿಲ್ ರವರು ವಿತರಿಸಿ ಯುವಕರು ಈ ದೇಶದ ಆಸ್ತಿ ಅವರಿಗೆ ಒಳ್ಳೆಯ ಧಾರ್ಮಿಕ ಮತ್ತು ಲೌಕಿಕ ಶೀಕ್ಷಣವನ್ನು ಕೊಡಬೇಕು ಮತ್ತು ಅವರಿಗೆ ಸ್ವಾವಲಂಬಿಗಳಾಗಿ ಬದುಕಲು ಪ್ರೇರೇಪಿಸಬೇಕೆಂದರು ಇದೇ ಸಂಧರ್ಭದಲ್ಲಿ ತನ್ನ ಮರಣ ಹೊಂದಿದ ಸಹೋದರ ಹಾಗೂ ಮದರಸದ ಹಳೆ ವಿಧ್ಯಾರ್ಥಿಯಾಗಿದ್ದ ಟಿ.ಎಂ ಮುದಸ್ಸರ್ ತೆಕ್ಕಿಲ್ ರವರ ಸ್ಮರಣಾರ್ಥ ರೂ. ಐದುಸಾವಿರ ಮೊತ್ತವನ್ನು ಮದರಸದ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೆ ಹಂಚಿದರು. ಸದರ್ ಸಹದ್ ಪೈಝಿ ಹಾಗೂ ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್‌ಹರಿ ಕಲಾಸಾಹಿತ್ಯದ ನೇತ್ರತ್ವ ವಹಿಸಿದರು ವೇದಿಕೆಯಲ್ಲಿ ದಿಕ್ರ್ ಸ್ವಲಾತ್ ಉಪಾಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮುಹಮ್ಮದ್ ಮಾಜಿ ಅಧ್ಯಕ್ಷರುಗಳಾದ ಹಾಜಿ ಎಸ್.ಇ ಮುಹಮ್ಮದ್, ಅಬ್ದುಲ್‌ಖಾದರ್‌ಪಟೇಲ್ ಎ.ಹೆಚ್.ವೈ.ಎಯ ಸ್ಥಾಪಕಾಧ್ಯಕ್ಷ ಟಿ.ಎಂ ಬಾಬಾಹಾಜಿ ತೆಕ್ಕಿಲ್, ಅಸೋಸಿಯೇಶನ್ ಕಾರ್ಯದರ್ಶಿ ಪಸೀಲು, ಮದರಸ ಮ್ಯಾನೇಜ್ ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಆಶಿಕ್ ಕುಕ್ಕುಂಬಳ, ಎ. ಹನೀಫ್, ತಾಜುದ್ಧೀನ್ ಅರಂತೋಡು, ಸಂಶುದ್ದೀನ್ ಪೆಲ್ತಡ್ಕ ಕೆ.ಎಂ ಮೊಯಿದು ಕುಕ್ಕುಂಬಳ , ಅಝರುದ್ಧೀನ್, ಮನ್ಸೂರ್ ಜುಬೈರ್, ಮುಝಮ್ಮಿಲ್ ಮೊದಲಾದವರಿದ್ದರು. ಮದರಸ ವಿಧ್ಯಾರ್ಥಿಗಳ ಸಾಹಿತ್ಯ ಕಲಾ ಸ್ಪರ್ಧೆಯಲ್ಲಿ ದುಲ್ ದುಲ್ ತಂಡ ಪ್ರಥಮ ಸ್ಥಾನ ಪಡೆದರೆ ಹುದ್ ಹುದ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಅನ್ವಾರುಲ್ ಹುದಾ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ಧುಲ್ ಮಜೀದ್ ಸ್ವಾಗತಿಸಿದರು. ಜಮಾಅತ್ ಕಾರ್ಯದರ್ಶಿ ಕೆ.ಎಮ್ ಮೂಸಾನ್ ವಂದಿಸಿದರು.

 

 

LEAVE A REPLY

Please enter your comment!
Please enter your name here