ಅಡ್ತಲೆ : ಧಾರ್ಮಿಕ ಶಿಕ್ಷಣ ತರಗತಿ ಕಾರ್ಯಕ್ರಮ ಉದ್ಘಾಟನೆ

0

ನಾಗರಿಕ ಹಿತರಕ್ಷಣ ವೇದಿಕೆ ಅಡ್ತಲೆ ಮತ್ತು ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ವತಿಯಿಂದ ಸ.ಹಿ.ಪ್ರಾ. ಶಾಲೆ ಅಡ್ತಲೆ ಇದರ ವಠಾರದಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಕಾರ್ಯಕ್ರಮ ದಿನಾಂಕ ಸೆ. 25. ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಹಿತರಕ್ಷಣಾ ವೇದಿಕೆ ಆಡ್ತಲೆ ಇದರ ಅಧ್ಯಕ್ಷ ಹರಿಪ್ರಸಾದ್ ಆಡ್ತಲೆ ವಹಿಸಿದ್ದರು.

ಗೌರವ ಸಲಹೆಗಾರರಾದ ಗಣೇಶ್ ಮಾಸ್ತರ್ ಅಡ್ತಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸನಾತನ ಹಿಂದೂ ಜನಜಾಗೃತಿ ವೇದಿಕೆಯ ಪ್ರವರ್ತಕ ಧನಂಜಯ ಬಿ. ಧಾರ್ಮಿಕ ಪ್ರವಚನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪಂದನ ಗೆಳೆಯರ ಬಳಗ ಅಡ್ತಲೆ ಅಧ್ಯಕ್ಷ ವಿನಯ್ ಕುಮಾರ್ ಬೆದ್ರುಪಣೆ, ಗ್ರಾಮ ಪಂಚಾಯತ್ ಅರಂತೋಡು ಉಪಾಧ್ಯಕ್ಷೆ ಕುಮಾರಿ ಶ್ವೇತಾ ಅರಮನೆಗಯ, ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ,ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಅಡ್ತಲೆ ಪರಿಸರದ ದೈವಸ್ಥಾನಗಳ ಪೂಜಾರಿ ವರ್ಯಯರಾದ ತೀರ್ಥರಾಮ ಅಡ್ತಲೆ, ಗೋಪಾಲಕೃಷ್ಣ ಪಿಂಡಿಮನೆ , ನಾರಾಯಣ ಮೇಲಡ್ತಲೆ ಬೆದ್ರುಪಣೆ ವಹಿಸಿದ್ದರು. ವೇದಿಕೆಯ ಸದಸ್ಯ ಲೋಹಿತ್ ಮೇಲಡ್ತಲೆ ಸ್ವಾಗತಿಸಿ, ಹೋರಾಟ ಸಮಿತಿ ಅಧ್ಯಕ್ಷ ಮೋಹನ್ ಕಿನಾಲ ಅಡ್ತಲೆ ಧನ್ಯವಾದವನ್ನು ನೆರವೇರಿಸಿದರು. ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ನಾಗರಿಕ ಹಿತ ರಕ್ಷಣ ವೇದಿಕೆ ಅಡ್ತಲೆ ಹಾಗೂ ಸ್ಪಂದನ ಗೆಳೆಯರ ಬಳಗದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here