ಉಜಿರೆ: ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ವಿಶಿಷ್ಟವಾಗಿ ಆಚರಿಸಿದ ಮಕ್ಕಳ ದಿನಾಚರಣೆ

0

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶ್ರೀ ಮಂಜುನಾಥ ದಳದ ವಿದ್ಯಾರ್ಥಿಗಳು ಹಾಗೂ ಜೂನಿಯರ್ ರೆಡ್ ಕ್ರಾಸ್ ನ ವಿದ್ಯಾರ್ಥಿಗಳು ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ( ಎಂಡೋ ಸಂತ್ರಸ್ತರಿಗಾಗಿ)ಉಜಿರೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶ್ರೀ ಮಂಜುನಾಥ ದಳದ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಡಾನ್ಸ್, ಹಾಡು, ಭರತನಾಟ್ಯದ ಮೂಲಕ ಮಕ್ಕಳನ್ನು ರಂಜಿಸಿದರು.  ಹಾಗೂ ಮಕ್ಕಳಿಗೆ ಕ್ರಾಫ್ಟ್ ಮೂಲಕ ಗೊಂಬೆಗಳನ್ನು ತಯಾರಿಸಿ ಮಕ್ಕಳ ಬೆರಳುಗಳಿಗೆ ಹಾಕಿ ಮಕ್ಕಳನ್ನು ಮುದಗೊಳಿಸಿದರು, ಅಲ್ಲದೆ ಚಿತ್ರ ಬಿಡಿಸಿ ಬಣ್ಣ ಹಚ್ಚುವುದರ ಮೂಲಕ ಮಕ್ಕಳ ಮನಸ್ಸನ್ನು ಗೆದ್ದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ  ಹೇಮಲತಾ ಎಂ ಆರ್, ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ( ಎಂಡೋ ಸಂತ್ರಸ್ತರಿಗಾಗಿ) ಮೇಲ್ವಿಚಾರಕಿ  ಮಲ್ಲಿಕಾ, ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ರೆಡ್ ಕ್ರಾಸ್ ಜೂನಿಯರ್ ಕೌನ್ಸಿಲರ್  ಪ್ರಮೀಳಾ, ಸಹ ಶಿಕ್ಷಕ  ಮಂಜುನಾಥ್, ಹಾಗೂ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ( ಎಂಡೋ ಸಂತ್ರಸ್ತರಿಗಾಗಿ) ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ( ಎಂಡೋ ಸಂತ್ರಸ್ತರಿಗಾಗಿ) ಶಾಲೆಯ ಶಿಕ್ಷಕಿ ನಿರೀಕ್ಷಾ, ಸ್ವಾಗತವನ್ನು ಮೇಲ್ವಿಚಾರಕಿ ಮಲ್ಲಿಕಾ, ಧನ್ಯವಾದವನ್ನು ಶಿಕ್ಷಕಿ ಗೀತಾ ನೆರವೇರಿಸಿಕೊಟ್ಟರು.

LEAVE A REPLY

Please enter your comment!
Please enter your name here