ಬೆಳಾಲು ಶ್ರೀ ಧ. ಮ.ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

0


ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಜರುಗಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ  ಜಯಂತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜತ್ತನ್ನ ಗೌಡರವರು ಮಾತನಾಡುತ್ತಾ, ನೆಹರೂರವರು ತ್ಯಾಗದ ಸಂಕೇತವಾಗಿ ಬದುಕು ಸವೆಸಿದವರು. ಅಂತಹ ತ್ಯಾಗ ಬುದ್ಧಿ ಎಲ್ಲರಿಗೂ ಪ್ರೇರಣೆಯಾಗಬೇಕೆಂದು ಹೇಳುತ್ತಾ , ರಾಜ್ಯ ಮಟ್ಟದ ಉತ್ತಮ ಖಾಸಗಿ ಕನ್ನಡ ಶಾಲೆ ಪುರಸ್ಕಾರಕ್ಕೆ ಪಾತ್ರವಾದ ಬೆಳಾಲು ಪ್ರೌಢಶಾಲೆಯು ಊರಿಗೇ ಕೀರ್ತಿ ತಂದಿದೆ ಎನ್ನುತ್ತಾ ಅಭಿನಂದನೆಗಳನ್ನು ಸಲ್ಲಿಸಿದರು.

ಇನ್ನೋರ್ವ ಅತಿಥಿ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಬೆಳಾಲು ತಿಮ್ಮಪ್ಪ ಗೌಡ ಹಳ್ಳಿ ಪ್ರದೇಶದಲ್ಲಿ ಕನ್ನಡ ಶಾಲೆಯಾಗಿ ಮಾಡಿದ ಸಾಧನೆ ಸಣ್ಣ ವಿಷಯವಲ್ಲ. ಡಾ. ಡಿ ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿರುವ ಶಾಲೆಗೆ ಸಂದ ಗೌರವ ಊರಿಗೇ ಸಂದಂತೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಭೀಮಂಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಾಲು ಘಟಕದ ಸೇವಾ ಪ್ರತಿನಿಧಿ ಶ್ರೀಮತಿ ಆಶಾರವರು ಶುಭಹಾರೈಸಿದರು. ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ಮತ್ತು ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪದ್ಮಿನಿ ಮತ್ತು ಜೀವನ್ ರವರು ಮಕ್ಕಳ ದಿನದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಿಶ್ಮಿತಾ ಸ್ವಾಗತಿಸಿ ದಯಾನಂದ ವಂದಿಸಿದರು. ತೀರ್ಥೇಶ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here