ಮಚ್ಚಿನ: ಎಸ್ ಕೆ ಎಸ್ಎಸ್ ಎಫ್ ಬಂಗೇರಕಟ್ಟೆ ಶಾಖೆ ಹಾಗೂ ಎಸ್ ಕೆ ಎಸ್ಎಸ್ ಎಫ್ ಕ್ಯಾಂಪಸ್ ವಿಂಗ್ ಬಂಗೇರಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಶಮೀಮೇ ಮದೀನಾ ಮಿಲಾದ್ ಫೆಸ್ಟ್ ಮಚ್ಚಿನ ಬಂಗೇರಕಟ್ಟೆಯಲ್ಲಿ ಅ.16 ರಂದು ಜರುಗಿತು.
ವೇದಿಕೆಯಲ್ಲಿ ಜಮಾಅತಿನ ಎಲ್ಲಾ ನಾಯಕರು ಉಪಸ್ಥಿತರಿದ್ದು, ಎಸ್ ಕೆ ಎಸ್ಎಸ್ ಎಫ್ ಹಿರಿಯ ಹಾಗೂ ಕಿರಿಯ ನಾಯಕರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಪ್ರವಾದಿ ಜನ್ಮ ದಿನಾಚರಣೆಯ ಪ್ರಯುಕ್ತ ಕ್ಯಾಂಪಸ್ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನೀಡಲಾಯಿತು.