ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ 9ನೇ ತರಗತಿಯ ಅಪೇಕ್ಷ ಹಂಸಿನಿ , ಅನಿಕಾ, ಸಮನ್ವಿ, ಭಾರ್ಗವಿ, ಸುಮಿತ್ ಹಾಗೂ 8ನೇ ತರಗತಿಯ ಚಿನ್ಮಯ ಆರ್, ಮನ್ವಿತ್ ಇವರ ತಂಡವು ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರಲ್ಲಿ 9ನೇ ತರಗತಿಯ ಅಪೇಕ್ಷಾ ಇವರಿಗೆ ಅತ್ಯುತ್ತಮ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಇವರಿಗೆ ಸಹಶಿಕ್ಷಕಿಯರಾದ ಆಶಾ ಹಾಗೂ ರೇಖಾ ರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿಯವರು ತಿಳಿಸಿರುತ್ತಾರೆ.