ಜಿಲ್ಲೆಯಲ್ಲಿ ನಡೆದ ಕೊಲೆಗೆ ಸಾಂತ್ವನ ಪರಿಹಾರದಲ್ಲಿ ತಾರತಮ್ಯ, ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಮನವಿ

0


ಬೆಳ್ತಂಗಡಿ : ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ಮೂರು ಮಂದಿ ಅಮಾಯಕರ ಕೊಲೆಯಾಗಿದ್ದು, ಪ್ರವೀಣ್ ನೆಟ್ಟಾರ್ ಮನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪ್ರಕರಣವನ್ನು ಎನ್ ಐ ಎ ವಹಿಸಿಕೊಟ್ಟು ಪರಿಹಾರ ಘೋಷಣೆ ಮಾಡಿದರು, ಕೊಲೆಯಾಗಿದ್ದ ಪಾಝಿಲ್ ಮತ್ತು ಮಸೂದ್ ರ ಮನೆಗೆ ಭೇಟಿ ನೀಡದೆ ಮತ್ತು ಪರಿಹಾರ ಘೋಷಣೆ ಮಾಡದೆ ತಾರತಮ್ಯ ಮಾಡಿದ್ದಾರೆಂದು ಮತ್ತು ಈ ಇಬ್ಬರ ಕೊಲೆ ಪ್ರಕರಣವನ್ನು ಎನ್ ಐ ಎ ನೀಡಿ ಪರಿಹಾರ ಘೊಷಿಸುವಂತೆ ಕರ್ನಾಟಕದ ರಾಜ್ಯಪಾಲರಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮೀಣ ಘಟಗಳು ಬೆಳ್ತಂಗಡಿ ತಹಸಿಲ್ದಾರ ಮೂಲಕ ಸೆ.21ರಂದು ಮನವಿ ಸಲ್ಲಿಸಿದರು.

ಸಂದರ್ಭದಲ್ಲಿ ಬ್ಲಾಕ್ ಕಾಗ್ರೇಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ.ಗೌಡ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಉಸ್ತುವಾರಿ ಎಮ್.ಎಸ್ ಮಹಮ್ಮದ್,ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಕೆಪಿಸಿಸಿ ಸದಸ್ಯರು ಕೇಶವ ಗೌಡ ಪಿ., ಡಿಸಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್, ಡಿಸಿಸಿ ಉಪಾಧ್ಯಕ್ಷ ರುಗಳಾದ ಬಿಎಮ್ ಹಮೀದ್,  ಲೋಕೇಶ್ವರಿ, ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ., ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ವಂದನಾ ಭಂಡಾರಿ, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರುಗಳಾದ ಅಶ್ರಾಪ್ ನೆರಿಯ, ಮೊದಲಾದ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here